ಅಫ್ಘಾನಿಸ್ತಾನದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಗಂಭೀರ ಪರಿಣಾಮ ಎದುರಾಗಲಿದೆ: ವಿಶ್ವ ಸಮುದಾಯಕ್ಕೆ ಪಾಕ್ ಎಚ್ಚರಿಕೆ

Update: 2021-12-19 18:37 GMT

ಲಾಹೋರ್,ಡಿ.19: ಆರ್ಥಿಕತೆ ತೀವ್ರವಾಗಿ ಹದಗೆಟ್ಟಿರುವ ಅಫ್ಘಾನಿಸ್ತಾನದ ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಅಂತಾರಾಷ್ಟ್ರೀಯ ಸಮುದಾಯವು ಗಂಭೀರವಾದ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಪಾಕಿಸ್ತಾನವು ಎಚ್ಚರಿಕೆ ನೀಡಿದೆ. ತಾಲಿಬಾನ್ ಅಧಿಕಾರ ವಶಪಡಿಸಿಕೊಂಡ ಬಳಿಕ ಅಫ್ಘಾನಿಸ್ತಾನದ ಕುರಿತಾಗಿ ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆ (ಐಓಎಸ್) ಲಾಹೋರ್‌ನಲ್ಲಿ ಆಯೋಜಿಸಿದ ಬೃಹತ್ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅದು ಈ ಹೇಳಿಕೆ ನೀಡಿಈದೆ. ಅಫ್ಘಾನಿಸ್ತಾನದಲ್ಲಿ ತೀವ್ರವಾದ ಮಾನವೀಯತಾ ಬಿಕ್ಕಟ್ಟು ತಲೆದೋರುವುದನ್ನು ತಡೆಯಲು ಜಾಗತಿಕ ನಾಯಕರು ಮಾರ್ಗೋಪಾಯಗಳನ್ನು ಕಂಡುಹಿಡಿಯಬೇಕೆಂದು ಅದು ಆಗ್ರಹಿಸಿದೆ.

ಐಓಸಿ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮುಹಮ್ಮದ್ ಅವರು ಅಫ್ಘಾನಿಸ್ತಾನದಲ್ಲಿ ಸಂಪೂರ್ಣವಾದ ಆರ್ಥಿಕ ಪತನದ ಅಪಾಯವಿರುವದುನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಖುರೇಶ್ ತಿಳಿಸಿದರು.
   
ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಆ ದೇಶದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಪ್ರಮುಖ ಅಂತಾರಾಷ್ಟ್ರೀಯ ದೇಣಿಗೆದಾರರು ನಿಧಿಗಳನ್ನು ಸ್ತಂಭನಗೊಳಿಸುವ ಮೂಲಕ ತಮ್ಮ ಬೆಂಬಲವನ್ನು ಸ್ಥಗಿತಗೊಳಿಸಿದರು. ಈ ಮಧ್ಯೆ ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳು ಬರಪೀಡಿತವಾಗಿರುವುದು ಅಲ್ಲಿನ ಆರ್ಥಿಕ ಪರಿಸ್ಥಿತಿಯನ್ನು ಇಈನ್ನಷ್ಟು ಶೋಚನೀಯಗೊಳಿಸಿದೆ.ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿ, ಒಂದು ವೇಳೆ ಜಗತ್ತು ಅಫ್ಘಾನಿಸ್ತಾನದ ಆರ್ಥಿಕತೆಯ ಸುಧಾರಣೆ ಬಗ್ಗೆ ತಕ್ಷಣವೇ ಕಾರ್ಯಪ್ರವೃತ್ತವಾಗದೆ ಇದ್ದಲ್ಲಿ, ಅದೊಂದು ಅತಿ ದೊಡ್ಡ ಮಾನವ ನಿರ್ಮಿತ ಬಿಕ್ಕಟ್ಟಾಗಿ ಪರಿವರ್ತನೆಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಮೆರಿಕವು ತಾಲಿಬಾನ್ ಆಡಳಿತಕ್ಕೂ ಹಾಗೂ ಅಫ್ಘಾನಿಸ್ತಾನದ 4 ಕೋಟಿ ನಾಗರಿಕರಿಗೂ ನಂಟನ್ನು ಕಲ್ಪಿಸಬಾರದು ಎಂದವರು ಹೇಳಿದ್ದಾರೆ.

ಅಫ್ಘಾನಿಸ್ತಾನಕ್ಕೆ ಆಥರ್ಇಕ ನೆರವನ್ನು ಒದಗಿಸುವ ಉದ್ದೇಶಿಂದ ಐಓಸಿ ಈ ಸಮಾವೇಶವನ್ನು ಆಯೋಜಿಸಿತ್ತು. ದೀರ್ಘಸಮಯದಿಂದ ಬಡತನ ಹಾಗೂ ಬರವನ್ನು ಎದುರಿಸುತ್ತಿದ್ದ ಅಫ್ಘಾನಿಸ್ತಾನದ ಪರಿಸ್ಥಿತಿ, ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ಬಳಿಕ ಇನ್ನಷ್ಟು ಬಿಗಡಾಯಿಸಿತು.

ತಾಲಿಬಾನ್ ನೇತೃತ್ವದ ಸರಕಾರದ ಮಾನ್ಯತೆಯ ಬಗ್ಗೆ ಸ್ಪಷ್ಟಚಿತ್ರಣ ದೊರೆಯುವವರೆಹಗೆ ಅಫ್ಘಾನಿಸ್ತಾನದ ಜೊತೆಗಿನ ತನ್ನ ಒಡನಾಟವನ್ನು ಅಮಾನತಿನಲ್ಲಿರಿಸುವುದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News