×
Ad

ಮಂಗಳೂರು: ಮತ್ತೊಂದು ಒಮೈಕ್ರಾನ್ ಸೋಂಕು ಪತ್ತೆ

Update: 2021-12-20 10:01 IST
ಸಾಂದರ್ಭಿಕ ಚಿತ್ರ

ಮಂಗಳೂರು, ಡಿ. 20:   ನಗರದಲ್ಲಿ  ಮತ್ತೊಂದು ಕೊರೋನ ಸೋಂಕಿತರಲ್ಲಿ  ಒಮೈಕ್ರಾನ್ ಪತ್ತೆಯಾಗಿದೆ. ಈಗಾಗಲೇ ಕೋವಿಡ್ ನಿಯಂತ್ರಿತ ವಲಯ ಆಗಿ ಘೋಷಿಸಲಾಗಿರುವ ಶಿಕ್ಷಣ ಸಂಸ್ಥೆಯೊಂದರ  ವಿದ್ಯಾರ್ಥಿನಿಯಲ್ಲಿ  ಒಮೈಕ್ರಾನ್ ಪತ್ತೆಯಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ‌ ಮಾಹಿತಿ ನೀಡಿದ್ದಾರೆ‌.

ವಿದ್ಯಾರ್ಥಿನಿ ಆರೋಗ್ಯವಂತರಾಗಿದ್ದು, ಕೊರೋನ ಪಾಸಿಟಿವ್ ಆಗಿ 10 ದಿನಗಳಾಗಿದ್ದು ನಿನ್ನೆ ಮರು ತಪಾಸಣೆಗೆ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಶನಿವಾರ 5  ಒಮೈಕ್ರಾನ್ ಪ್ರಕರಣಗಳು ವರದಿಯಾಗಿತ್ತು. ದ.ಕ ಜಿಲ್ಲೆಯಲ್ಲಿ ಎರಡು ಕರೋನ ಕ್ಲಸ್ಟರ್‌ಗಳಿವೆ. ನಿನ್ನೆ  ಪತ್ತೆಯಾದ ಹೊಸ  ಒಮೈಕ್ರಾನ್ ಪ್ರಕರಣದ ಬಗ್ಗೆ ಆರೋಗ್ಯ ಸಚಿವ ಸುಧಾಕರ್  ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News