×
Ad

ಉಡುಪಿ: ಮತಾಂತರ ನಿಷೇಧ ಕಾಯಿದೆ ವಿರೋಧಿಸಿ ಉಪವಾಸ ಸತ್ಯಾಗ್ರಹ

Update: 2021-12-20 20:49 IST

ಉಡುಪಿ, ಡಿ.20: ಭಾರತೀಯ ಕ್ರೈಸ್ತ ಒಕ್ಕೂಟದ ನೇತೃತ್ವದಲ್ಲಿ ಯುಸಿಎಫ್ ಬೆಳಗಾವಿ ಮತ್ತು ವಿವಿಧ ಕ್ರೈಸ್ತ ಸಂಘಟನೆಗಳ ಬೆಂಬಲದೊಂದಿಗೆ ಮತಾಂತರ ನಿಷೇಧ ಕಾಯಿದೆಯನ್ನು ವಿರೋಧಿಸಿ ಡಿ.17ರಂದು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಬೆಳಗಾವಿಯ ವಿಕಾಸಸೌಧದ ಎದುರು ಹಮ್ಮಿಕೊಳ್ಳ ಲಾಗಿತ್ತು.

ಸತ್ಯಾಗ್ರಹದ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಸರಕಾರದ ಪ್ರತಿನಿಧಿಯಾಗಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಆಗಮಿಸಿ, ಪ್ರತಿಭಟನಕಾರರಿಂದ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿದರು. ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಶಾಂತ್ ಜತ್ತನ್ನ ಸಮ್ಯೆಗಳನ್ನು ಸಚಿವರಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಐವನ್ ಡಿಸೋಜ, ಬೆಳಗಾವಿಯ ಬಿಷಪ್ ಡೆರಿಕ್ ಫೆರ್ನಾಂಡಿಸ್, ಮೆಥೋಡಿಸ್ಟ್ ಡಿಸ್ಟ್ರಿಕ್ ಸುಪ್ರಿಡೆಂಟ್ ರೆ.ನಂದಕುಮಾರ್, ರೆ.ರವಿ ಮಣಿ ಸಂಜಯ್ ಬಿರೇದಾರ್, ರೆ.ರಾಜಶೇಖರ್, ರೆ.ಜಾನ್ಸನ್ ತೋಮಸ್, ಪೀಟರ್ ದಾಂತಿ ಗ್ಲಾಡ್ಸನ್ ಕರ್ಕಡ, ನ್ಯಾಯವಾದಿ ರಮೇಶ್, ಆನಂದ್ ಜಾನ್‌ಪೌಲ್ ಸೊಲೊ ಮನ್ ಸತೀಶ್ ಚಳಿಕೆರೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News