ನರ್ಮ್ ಬಸ್ ಬೇರೆ ಜಿಲ್ಲೆಗೆ ವರ್ಗಾಯಿಸದಂತೆ ಆಗ್ರಹಿಸಿ ಮನವಿ
ಉಡುಪಿ, ಡಿ.20: ಉಡುಪಿಯಲ್ಲಿರುವ ನರ್ಮ್ ಬಸ್‌ಗಳನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಸಿಪಿಎಂ ಉಡುಪಿ ವಲಯ ಸಮಿತಿ ಡಿ.17ರಂದು ಉಡುಪಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿತು.
ಉಡುಪಿಯಲ್ಲಿ ಸರಕಾರಿ ನರ್ಮ್ ಬಸ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಹಳ್ಳಿ ಹಳ್ಳಿಗಳಿಗೂ ಓಡಿಸಬೇಕು. ಹಾಸನ ಜಿಲ್ಲೆಗೆ ಉಡುಪಿಯ ನರ್ಮ್ ಬಸ್ ಗಳನ್ನು ವರ್ಗಾಯಿಸಬಾರದು. ಸರಕಾರಿ ಬಸ್ ಓಡಿಸಲು ಬೇಕಾದ ಸವಲತ್ತು ಗಳನ್ನು ನೀಡಬೇಕು. ಡಿಸಿ ಕಚೇರಿ ಮಾರ್ಗದಲ್ಲಿ ಹೆಚ್ಚಿನ ಬಸ್ ಓಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಉಡುಪಿ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಕವಿರಾಜ್, ಎಸ್.ಉಮೇಶ್ ಕುಂದರ್, ಉಡುಪಿ ವಲಯ ಸಮಿತಿ ಕಾರ್ಯದರ್ಶಿ ಶಶಿಧರ್ ಗೊಲ್ಲ, ಸಮಿತಿ ಸದಸ್ಯರಾದ ನಳಿನಿ, ಪಿ.ವಿಶ್ವ ನಾಥ್ ರೈ ಉಪಸ್ಥಿತರಿದ್ದರು.