ಹೊಳೆಗೆ ಬಿದ್ದು ಮೃತ್ಯು
Update: 2021-12-20 21:07 IST
ಬ್ರಹ್ಮಾವರ, ಡಿ.20: ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ಸ್ವರ್ಣನದಿ ಹೊಳೆಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕೊಳಂಬೆ ರಾಜೀವನಗರದ ವಿಠಲ ಕೋಟ್ಯಾನ್(65) ಎಂದು ಗುರುತಿಸಲಾಗಿದೆ. ಇವರು ಡಿ.17ರಂದು ಸ್ವರ್ಣ ನದಿಗೆ ಮೀನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿರಬಹುದು ಅಥವಾ ವೈಯುಕ್ತಿಕ ಸಮಸ್ಯೆಯಿಂದ ಮಾನಸಿಕವಾಗಿ ನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಇವರ ಮೃತದೇಹವು ಡಿ.19ರಂದು ಮಧ್ಯಾಹ್ನ ಹೇರೂರು ಗ್ರಾಮದ ನಾಯ್ಕರ ತೋಟ ಎಂಬಲ್ಲಿನ ಸ್ವರ್ಣ ನದಿಯ ಬದಿಯಲ್ಲಿ ದೊರೆತಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.