×
Ad

ಮರಣ ಪತ್ರ ಬರೆದಿಟ್ಟು ಜಾಗ ಮಾರಾಟದ ಬ್ರೋಕರ್ ಆತ್ಮಹತ್ಯೆ

Update: 2021-12-20 21:09 IST

ಕಾರ್ಕಳ, ಡಿ.20: ಜಾಗದ ಕಿರಿಕಿರಿಯಿಂದ ಮನನೊಂದ ಬ್ರೋಕರೊಬ್ಬರು ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಬೋಳ ಗ್ರಾಮದ ಬ್ರಹ್ಮರಪಾಡಿ ಎಂಬಲ್ಲಿ ಡಿ.19ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ಬೋಳ ಬ್ರಹ್ಮರಪಾಡಿಯ ಗಣೇಶ್ ಎ.ಎಸ್.(44) ಎಂದು ಗುರು ತಿಸಲಾಗಿದೆ. ನಿಟ್ಟೆ ಕಾಲೇಜಿನಲ್ಲಿ ಮ್ಯೆಕಾನಿಕಲ್ ಇಂಜಿನಿಯರಿಂಗ್ ಆಗಿದ್ದ ಇವರು, ಜಾಗ ಮಾರಾಟದ ಬ್ರೋಕರ್ ಕೆಲಸ ಕೂಡ ಮಾಡುತ್ತಿದ್ದರು. ಐದು ವರ್ಷಗಳ ಹಿಂದೆ ಹಾಳೆಕಟ್ಟೆಯ ಜಾಗವನ್ನು ಕೇರಳ ವ್ಯಕ್ತಿಗೆ ಮಾರಾಟ ಮಾಡಿದ್ದು ಕಳೆದ ಎರಡು ತಿಂಗಳಿ ನಿಂದ ಈ ಜಾಗದ ದಾರಿಯ ವಿಚಾರದಲ್ಲಿ ಇವರು ಮಾನಸಿಕವಾಗಿ ನೊಂದುಕೊಂಡಿದ್ದರು.

ಇದೇ ಕಾರಣಕ್ಕೆ ಅವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಪತ್ರ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News