×
Ad

ಕಿನ್ನಿಗೋಳಿ: ಹೆಜ್ಜೇನು ದಾಳಿ; 8 ಮಂದಿ ಆಸ್ಪತ್ರೆಗೆ ದಾಖಲು

Update: 2021-12-20 22:10 IST

ಮುಲ್ಕಿ: ಕಿನ್ನಿಗೋಳಿ ಸಮೀಪದ ಮೂರುಕಾವೇರಿ ರಾಜ್ಯ ಹೆದ್ದಾರಿ ಬಳಿಯ ಬಹುಮಹಡಿ ಕಟ್ಟಡವೊಂದರಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ಹೆದ್ದಾರಿಯಲ್ಲಿ ನಡೆದುಕೊಂಡು ಹಾಗೂ ಬೈಕಿನಲ್ಲಿ ಹೋಗುತ್ತಿದ್ದವರಿಗೆ ಕಚ್ಚಿದ ಪರಿಣಾಮ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯಾಳುಗಳನ್ನು ಕಿನ್ನಿಗೋಳಿ ಚರ್ಚ್ ಬಳಿಯ ನಿವಾಸಿ ಅಲ್ಫ್ರೆಡ್ ಸೈಮನ್ ಡಿಸೋಜಾ (65), ಕಿನ್ನಿಗೋಳಿ ಗೋಳಿಜೋರ ನಿವಾಸಿ ರವಿ (44), ಮುಂಡ್ಕೂರು ಜಾರಿಗೆ ಕಟ್ಟೆ ನಿವಾಸಿ ರಾಮಚಂದ್ರ ಕಾಮತ್ (52), ಮೂರುಕಾವೇರಿ ನಿವಾಸಿ ಸೂರ್ಯಕಾಂತ ನಾರಾಯಣ ನಾಯಕ (57), ಶರತ್ ಪೂಜಾರಿ ಮಾರಡ್ಕ(31), ಮೂರುಕಾವೇರಿ ರಾಜ್ ಹೆರಿಟೇಜ್  ನಿವಾಸಿಗಳಾದ ರಿಚಾರ್ಡ್(50), ರೆವಿಯಾನ್ (14), ಮುಚ್ಚೂರು ನಿವಾಸಿ ಮನೋಹರ (34) ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸಾಯಿಶ್ ಚೌಟ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಈ ಬಹುಮಹಡಿ ಕಟ್ಟಡದ ವಸತಿ ಸಂಕೀರ್ಣದಲ್ಲಿ ಜೇನು ನೊಣ ಗೂಡು ಕಟ್ಟಿದ್ದು ಅಪಾಯವನ್ನು ಆಹ್ವಾನಿಸುತ್ತಿದ್ದು ಕೂಡಲೇ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News