ಡಿ.22ರಂದು ಪುತ್ತೂರಿನಲ್ಲಿ ಇನ್‍ಲ್ಯಾಂಡ್ ಮಯೂರ ಉದ್ಘಾಟನೆ
ಮಂಗಳೂರು: ಕರ್ನಾಟಕದ ಮುಂಚೂಣಿಯ ಇನ್‍ಲ್ಯಾಂಡ್ ನಿರ್ಮಾಣ ಸಂಸ್ಥೆ ಪುತ್ತೂರಿನ ಹೃದಯ ಭಾಗದಲ್ಲಿ ನಿರ್ಮಿಸಿದ ಯೋಜನೆ ಇನ್‍ಲ್ಯಾಂಡ್ ಮಯೂರ ಡಿ.22ರಂದು ಉದ್ಘಾಟನೆಗೊಳ್ಳಲಿದೆ.
ಇನ್‍ಲ್ಯಾಂಡ್ ಮಯೂರ ಯೋಜನೆ ವಸತಿ ಹಾಗು ವಾಣಿಜ್ಯ ಸಮುಚ್ಚಯಗಳನ್ನು ಒಳಗೊಂಡಿದೆ. 72 ಅಪಾರ್ಟ್‍ಮೆಂಟ್ ಹಾಗು 34 ವಾಣಿಜ್ಯ, ಕಚೇರಿ ಮಳಿಗೆಗಳನ್ನು ಹೊಂದಿದೆ. ಮುಂಬೈ ಮತ್ತು ಮಂಗಳೂರಿನ ಅನುಭವಿ ವಾಸ್ತುಶಿಲ್ಪಿಗಳಿಂದ ಯೋಜನೆ ವಿನ್ಯಾಸಗೊಳಿಸಲಾಗಿದೆ.
ಅತ್ಯಾಧುನಿಕ, ಹೈಟೆಕ್ ಆಗಿ ಬೃಹತ್ ನಗರಗಳ ಕಟ್ಟಡಗಳಿಗೆ ಸಮಾನವಾಗಿ ರೂಪುಗೊಂಡಿದೆ. ವಸತಿ ಸಮುಚ್ಚಯವನ್ನು ಎಲ್ಲ ವಾತಾವರಣಗಳಿಗೆ ಹೊಂದಿಕೊಳ್ಳುವಂತೆ ಮತ್ತು ಎಲ್ಲರಿಗೂ ಮೆಚ್ಚುಗೆಯಾಗುವಂತೆ ವಿನ್ಯಾಸ ಮಾಡಲಾಗಿದೆ. ವಾಣಿಜ್ಯ ಕಟ್ಟಡಕ್ಕೆ ಅತ್ಯುತ್ತಮ ಗ್ಲಾಸ್‍ಗಳನ್ನು ಅಳವಡಿಸಲಾಗಿದ್ದು, ಮನಮೋಹಕವಾಗಿ ನಗರದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಾಗಿದೆ.
ಹಲವು ಸಮಯಗಳಿಂದ ಪುತ್ತೂರಿನ ಜನತೆ ಇಂತಹ ಉತ್ತಮ ಗುಣಮಟ್ಟದ ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳಿಗೆ ಕಾಯುತ್ತಿದ್ದರು. ಬೆಂಗಳೂರು, ಮಂಗಳೂರಿನಂತಹ ದೊಡ್ಡ ನಗರಗಳಂತೆ ಇಲ್ಲಿಯೂ ಇನ್‍ಲ್ಯಾಂಡ್ ಸಂಸ್ಥೆ ಜನರ ಆಶೋತ್ತರಗಳಿಗೆ ಸ್ಪಂದಿಸಿ, ಅವರ ಕನಸನ್ನು ನನಸಾಗಿಸಿದೆ.
ಇನ್‍ಲ್ಯಾಂಡ್ ಮಯೂರ 3 ಬಿಎಚ್‍ಕೆ 1530, 1550 ಮತ್ತು 1595 ಚ.ಅಡಿ ಹಾಗು 2 ಬಿಎಚ್‍ಕೆ 1170, 1190 ಮತ್ತು 1210 ಚ.ಅಡಿಯ ಮನೆಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ನೀಡುತ್ತಿದೆ. ವಾಣಿಜ್ಯ ಮಳಿಗೆಗಳು 450 ಚ.ಅಡಿಯಿಂದ 635 ಚ.ಅಡಿಯ ತನಕ ವಾಣಿಜ್ಯ ಕಚೇರಿಗಳು, ಕ್ಲಿನಿಕ್‍ಗಳು, ಸಲೂನ್‍ಗಳು, ತರಬೇತಿ ಕೇಂದ್ರಗಳಿಗೆ ಪೂರಕವಾಗುವಂತೆ ನಿರ್ಮಾಣ ಮಾಡಲಾಗಿದೆ.
ವಸತಿ ಸಮುಚ್ಚಯದಲ್ಲಿ ಆಧುನಿಕ ವ್ಯವಸ್ಥೆಗಳಾದ ಜಿಮ್ನೇಶಿಯಂ, ವಿಶಾಲ ಕಾರು ಪಾರ್ಕಿಂಗ್, ಮಕ್ಕಳಿಗೆ ಆಟವಾಡಲು ಸ್ಥಳಾವಕಾಶ, ಇಂಟರ್‍ಕಾಂ, 24 ಗಂಟೆ ಭದ್ರತಾ ವ್ಯವಸ್ಥೆ ಮತ್ತು ವಿದ್ಯುತ್ ಪೂರೈಕೆ ಮೊದಲಾದ ಸೌಲಭ್ಯಗಳನ್ನು ಹೊಂದಿದೆ.
ಇನ್‍ಲ್ಯಾಂಡ್ ಮಯೂರ ಪುತ್ತೂರಿನ ಹೃದಯ ಭಾಗವಾದ ಬಂಟರ ಭವನದ ಎದುರು ನಿರ್ಮಾಣಗೊಂಡಿದೆ. ಪ್ರತಿಷ್ಠಿತ ಶಾಲಾ, ಕಾಲೇಜುಗಳು, ಶಾಪಿಂಗ್ ಕೇಂದ್ರಗಳು, ಧಾರ್ಮಿಕ ಕೇಂದ್ರಗಳು, ಬಸ್ ನಿಲ್ದಾಣಗಳಿಗೆ ಸುಲಭವಾಗಿ ತಲುಪಲು ಪೂರಕವಾಗಿದೆ.
ಇನ್‍ಲ್ಯಾಂಡ್ ನಿರ್ಮಾಣ ಸಂಸ್ಥೆ ಕಳೆದ 35 ವರ್ಷಗಳಿಂದ ಗುಣಮಟ್ಟದ ಮನೆಗಳು, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಕೊಟ್ಟು ಗ್ರಾಹಕರ ಸಂತೃಪ್ತಿಗೆ ಪಾತ್ರವಾಗಿದೆ. ಈಗಾಗಲೇ 3 ಮಿಲಿಯನ್ ಚ.ಅಡಿಯ ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಗ್ರಾಹಕರ ಪ್ರೋತ್ಸಾಹವೇ ಯಶಸ್ಸಿಗೆ ಕಾರಣ ಎಂದು ಇನ್‍ಲ್ಯಾಂಡ್ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಸಿರಾಜ್ ಅಹ್ಮದ್ ತಿಳಿಸಿದ್ದಾರೆ.
ಗ್ರಾಹಕರಿಗೆ ಮನೆಗಳನ್ನು ನೀಡುವಾಗ ಅವರ ಜೀವನ ಭದ್ರತೆ ಮತ್ತು ನಾಳೆಯ ನೆಮ್ಮದಿಯ ಬದುಕು ಹಸನಾಗಿರಬೇಕು. ಅವರ ಕನಸಿಗೆ ಯಾವುದೇ ತೊಡಕು ಉಂಟಾಗಬಾರದು ಎನ್ನುವ ಬದ್ಧತೆಯನ್ನು ನಾವು ಹೊಂದಿದ್ದೇವೆ. ಗುಣಮಟ್ಟದ ಸಾಮಗ್ರಿಗಳನ್ನು ಬಳಸಿಕೊಂಡು, ಅತ್ಯಾಧುನಿಕ ಗರಿಷ್ಠ ಸೌಲಭ್ಯಗಳನ್ನು ಒದಗಿಸುವುದು ಸಂಸ್ಥೆಯ ಧ್ಯೇಯವಾಗಿದೆ. ಪುತ್ತೂರಿನಲ್ಲಿ ಅತ್ಯಂತ ಆಕರ್ಷನೀಯವಾಗಿ ಇನ್‍ಲ್ಯಾಂಡ್ ಮಯೂರ ಯೋಜನೆಯನ್ನು ನಿರ್ಮಿಸಲಾಗಿದೆ. ಈ ಅತ್ಯುತ್ತಮ ಯೋಜನೆಯ ಸಹಕಾರಕ್ಕೆ ಅನುಭವಿ ತಂತ್ರಜ್ಞರು ವಿಶೇಷವಾಗಿ ಶ್ರಮ ವಹಿಸಿದ್ದಾರೆ ಎಂದು ಸಿರಾಜ್ ಅಹ್ಮದ್ ತಿಳಿಸಿದ್ದಾರೆ.
ಡಿ.22ರಂದು ಉದ್ಘಾಟನೆ
ಇನ್‍ಲ್ಯಾಂಡ್ ಮಯೂರ ಯೋಜನೆಯನ್ನು ಡಿ.22ರಂದು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ಭೂಮಿಯ ಮಾಲಕ ಚಿಕ್ಕಪ್ಪ ನಾಯ್ಕ್, ಶಾಸಕ ಸಂಜೀವ ಮಠಂದೂರು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕಿಯರಾದ ಟಿ.ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್ ಭಂಡಾರಿ, ಪುತ್ತೂರು ನಗರ ಸಭೆ ಅಧ್ಯಕ್ಷ ಜೀವಂಧರ್ ಕೆ. ಜೈನ್, ಉಪಾಧ್ಯಕ್ಷೆ ವಿದ್ಯಾ ಗೌರಿ, ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು.
ಯೋಜನೆ ವಿಳಾಸ: ಇನ್‍ಲ್ಯಾಂಡ್ ಮಯೂರ, ಮುಖ್ಯರಸ್ತೆ ಪುತ್ತೂರು (ಬಂಟರ ಭವನದ ಎದುರು) ಫೋನ್ : 9972089099, 9972014055, 9686064312
ವೆಬ್‍ಸೈಟ್ : www.inlandbuilders.net, Email: mktg.mlr@inlandbuilders.net