ನನ್ನ ಮಕ್ಕಳ ಇನ್ ಸ್ಟಾಗ್ರಾಮ್ ಖಾತೆಯನ್ನೂ ಹ್ಯಾಕ್ ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ ಆರೋಪ

Update: 2021-12-21 12:41 GMT

ಲಕ್ನೋ: ರಾಜಕೀಯ ವಿರೋಧಿಗಳ ಮೇಲೆ ಚುನಾವಣಾ ಪೂರ್ವ ದಾಳಿಗಳು ಹಾಗೂ ಅಕ್ರಮ ಫೋನ್ ಕಣ್ಗಾವಲು ಆರೋಪಗಳ ಕುರಿತ ಪ್ರಶ್ನೆಗೆ ಉತ್ತರಿಸಿದ  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸಾಮಾಜಿಕ ಮಾಧ್ಯಮದಲ್ಲಿ ಸರಕಾರ ನನ್ನ ಮಕ್ಕಳನ್ನು ಬೇಟೆಯಾಡುತ್ತಿದೆ ಎಂದು ಆರೋಪಿಸಿದ್ದಾರೆ.

"ಅವರು ಫೋನ್ ಕದ್ದಾಲಿಕೆ ಮಾಡುವ ವಿಚಾರ ಬಿಡಿ,  ಅವರು ನನ್ನ ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಸಹ ಹ್ಯಾಕ್ ಮಾಡುತ್ತಿದ್ದಾರೆ. ಅವರಿಗೆ ಬೇರೆ ಕೆಲಸವಿಲ್ಲವೇ?" ಎಂದು ಪ್ರಶ್ನೆಯೊಂದಕ್ಕೆ ಪ್ರಿಯಾಂಕಾ ಪ್ರತಿಕ್ರಿಯಿಸಿದರು.

ಪ್ರಿಯಾಂಕಾ ಗಾಂಧಿ ವಾದ್ರಾಗೆ ಇಬ್ಬರು ಮಕ್ಕಳಿದ್ದಾರೆ. ಮಿರಾಯಾ ವಾದ್ರಾ( 18 ವರ್ಷ)ಮತ್ತು ರೈಹಾನ್ ವಾದ್ರಾ(20). ಅವರು ಅಪರೂಪವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.

"ಉತ್ತರಪ್ರದೇಶದ ಮಹಿಳೆಯರಿಗೆ ನಾನು ಏನು ಹೇಳಿದ್ದೇನೆ? ತಮ್ಮ ಅಧಿಕಾರವನ್ನು ಬಳಸಲು  ಹೇಳಿದ್ದೆ. ಈಗ ಪ್ರಧಾನಿ ಮೋದಿ ಕೂಡ ಮಣಿದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರು ಈ ಯೋಜನೆ ಏಕೆ ಘೋಷಿಸಲಿಲ್ಲ? ಈಗ ಚುನಾವಣೆಗೆ ಮುನ್ನಏಕೆ ಘೋಷಿಸಿದ್ದಾರೆ? ಮಹಿಳೆಯರು ನಮ್ಮ 'ಲಡ್ಕಿ ಹೂಂ, ಲಡ್ ಸಕ್ತಿ ಹೂಂ' ಘೋಷಣೆ ಯಿಂದಾಗಿ ಎಚ್ಚೆತ್ತುಕೊಂಡಿದ್ದಾರೆ'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News