×
Ad

ಹಡಿಲು ಭೂಮಿ ಕೃಷಿ ಯೋಜನೆಯ ಅಕ್ಕಿ ದಿವ್ಯಾಂಗರ ವಸತಿ ಕೇಂದ್ರಕ್ಕೆ ಹಸ್ತಾಂತರ

Update: 2021-12-21 18:48 IST

ಬ್ರಹ್ಮಾವರ, ಡಿ.21: ಉಪ್ಪೂರು ಕೊಳಲಗಿರಿ ಯುವ ವಿಚಾರ ವೇದಿಕೆ ವತಿಯಿಂದ ಸಂಘವು ಹಡಿಲು ಭೂಮಿ ಕೃಷಿ ಯೋಜನೆಯಿಂದ ಕೃಷಿ ಮಾಡಿ ಪಡೆದ ಸುಮಾರು 2 ಕ್ವಿಂಟಾಲ್ ಅಕ್ಕಿಯನ್ನು ಉಪ್ಪೂರು ಗ್ರಾಮದ ಸಾಲ್ಮರದಲ್ಲಿ ರುವ ಸ್ಪಂದನ ಭೌದ್ಧಿಕ ದಿವ್ಯಾಂಗರ ವಸತಿ ಕೇಂದ್ರಕ್ಕೆ ವಿತರಿಸಲಾಯಿತು.

ಅಕ್ಕಿಯನ್ನು ಸಂಸ್ಥೆಗೆ ಹಸ್ತಾಂತರಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತನಾಡಿ, ಕೃಷಿಯ ಅಭಿವೃದ್ಧಿಯಲ್ಲಿ ಯುವಜನರು ಕ್ರಿಯಾಶೀಲತೆಯಿಂದ ಭಾಗವಹಿಸಿದರೆ ಗ್ರಾಮೀಣಭಿವೃದ್ಧಿಯ ಪರಿಕಲ್ಪನೆ ಸಾಕಾರಗೊಳ್ಳುತ್ತದೆ. ಕೃಷಿಯ ಬಗ್ಗೆ ಯುವಜನರಲ್ಲಿ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಯುವ ವಿಚಾರ ವೇದಿಕೆಯ ಕಾರ್ಯ ಶ್ಲ್ಯಾಘನೀಯ ಎಂದರು.

ಗ್ರಾಮ ಪಂಚಾಯತ್ ಸದಸ್ಯ ಅಶ್ವಿನ್ ರೋಚ್ ಶುಭ ಹಾರೈಸಿದರು. ಸ್ಪಂದನ ಸ್ಥಾಪಕ ಪ್ರಾಂಶುಪಾಲ ಜನಾರ್ದನ್, ಉಮೇಶ್, ಯುವ ವಿಚಾರ ವೇದಿಕೆಯ ಅಧ್ಯಕ್ಷ ದಿನೇಶ್ ಶೆಟ್ಟಿ, ಹಿರಿಯ ಸದಸ್ಯ ಮಾಧವ ಪಾಣ, ಕಾರ್ಯದರ್ಶಿ ಸುಕೇಶ್ ಪಾಣ, ಸದಸ್ಯರುಗಳಾದ ಶೋಭಾ ಯೋಗಿಶ್, ಶಕುಂತಲ, ಬ್ರಂದಾ, ಸೌಮ್ಯ, ಹರಿಣಾಕ್ಷಿ, ಸದಾಶಿವ, ಅಶೋಕ್, ರವೀಂದ್ರ, ಶಶಿಕುಮಾರ್, ಸುಬ್ರಮಣ್ಯ, ವೈಭವ್, ಶ್ರೇಯಸ್ ಉಪಸ್ಥಿತರಿದ್ದರು.

ಸುಬ್ರಮಣ್ಯ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News