×
Ad

ಭಟ್ಕಳ: ಜಾನುವಾರು ಅಕ್ರಮ ಸಾಗಾಟ ಆರೋಪ; ಇಬ್ಬರ ಬಂಧನ

Update: 2021-12-21 18:54 IST

ಭಟ್ಕಳ: ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ನಗರಠಾಣೆ ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ.

ಬಂಧಿತರನ್ನು ಮುಝಫ್ಫರ್ ಹುಸೈನ್ ಮತ್ತು ಅಬ್ದುಲ್ ರಹ್ಮಾನ್ ಎಂದು ಗುರುತಿಲಾಗಿದೆ.

ಇವರು ಎರಡು ಹೋರಿಗಳನ್ನು ಅನುಮತಿ ಇಲ್ಲದೆ ಭಟ್ಕಳಕ್ಕೆ ಸಾಗಿಸುತ್ತಿದ್ದ  ವೇಳೆ ಪುರವರ್ಗ ರಾಷ್ಟ್ರೀಯ ಹೆದ್ದಾರಿ 66ರ ಚರ್ಚ್ ಎದುರು ವಾಹನ ತಡೆದ ಪೊಲೀಸರು ಇಬ್ಬರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News