×
Ad

ಡಿ. 24ರಂದು 'ಏರೆಗಾವುಯೆ ಕಿರಿಕಿರಿ' ತುಳು ಚಲನಚಿತ್ರ ಬಿಡುಗಡೆ

Update: 2021-12-21 19:53 IST

ಮಂಗಳೂರು, ಡಿ.21: ವೇಗಸ್ ಫಿಲಮ್ಸ್ ಲಾಂಛನದಲ್ಲಿ ತಯಾರಾದ ಹಿರಿಯ ಸಾಹಸ ನಿರ್ದೇಶಕ ರಾಮ್ ಶೆಟ್ಟಿ ಯು. ನಿರ್ದೇಶನದ, ರೋಶನ್ ವೇಗಸ್ ನಿರ್ಮಾಣದ ‘ಏರೆಗಾವುಯೆ ಕಿರಿಕಿರಿ’ ತುಳು ಚಲನಚಿತ್ರ ಡಿ. 24 ರಂದು ಕರಾವಳಿ ಜಿಲ್ಲೆ ಯಾದ್ಯಂತ ತೆರೆ ಕಾಣಲಿದೆ ಎಂದು ಚಲನಚಿತ್ರ ನಟ ನವೀನ್ ಡಿ ಪಡೀಲ್ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಬಿಗ್ ಸಿನಿಮಾಸ್, ಪಿ.ವಿ.ಆರ್, ಸಿನಿ ಪೊಲೀಸ್, ಉಡುಪಿಯಲ್ಲಿ ಕಲ್ಪನಾ, ಕಾರ್ಕಳದಲ್ಲಿ ರಾಧಿಕಾ, ಮಣಿಪಾಲದಲ್ಲಿ ಭಾರತ್ ಮಾಲ್, ಮಡಿಕೇರಿ ಶುಂಠಿಕೊಪ್ಪ ಗಣೇಶ ಟಾಕೀಸ್, ಬೆಳ್ತಂಗಡಿಯಲ್ಲಿ ಭಾರತ್ ಸಿನಿಮಾ ಮಂದಿರದಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದರು.

ನಿರ್ದೇಶಕ ರಾಮ್ ಶೆಟ್ಟಿ ಮಾತನಾಡಿ, ಏರೆಗಾವುಯೆ ಕಿರಿಕಿರಿ ಚಿತ್ರ ಸುಮಾರು 40 ದಿನಗಳ ಕಾಲ ಉಡುಪಿ, ಬ್ರಹ್ಮಾವರ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ರೋಶನ್ ವೇಗಸ್, ಶ್ರದ್ಧಾ ಸಾಲಿಯಾನ್, ಪ್ರದೀಪ್ ಚಂದ್ರ ಕುತ್ಪಾಡಿ, ಹರೀಶ್ ವಾಸು ಶೆಟ್ಟಿ, ಸಾಯಿ ಕೃಷ್ಣ ಕುಡ್ಲ, ಉಮೇಶ್ ಮಿಜಾರ್, ಸುಂದರ್ ರೈ ಮಂದಾರ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಸರೋಜಿನಿ ಶೆಟ್ಟಿ, ಕೋಡಪದವು ದಿನೇಶ್ ಶೆಟ್ಟಿ ಗಾರ್, ಪಿಂಕಿ ರಾಣಿ, ಶೇಖರ್ ಭಂಡಾರಿ, ರಘು ಪಾಂಡೇಶ್ವರ್, ಪವಿತ್ರ ಶೆಟ್ಟಿ, ಡಿ.ಬಿ.ಸಿ ಶೇಖರ್, ಸುನಿಲ್ ನೆಲ್ಲಿಗುಡ್ಡೆ, ಕುಶಿ ಶೇಖರ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ನಾಯಕ ನಟನಾಗಿ ನವೀನ್ ಡಿ. ಪಡೀಲ್ ಮತ್ತು ಮೊಹಮ್ಮದ್ ನಯೀಮ್ ನಾಯಕಿಯಾಗಿ ಐಶ್ವರ್ಯ ಹೆಗ್ಡೆ, ಶ್ರದ್ಧಾ ಸಾಲ್ಯಾನ್ ಅಭಿನಯಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕಾರಿ ನಿರ್ಮಾಪಕರಾಗಿ ನಿಕ್ಷಿತ್ ರಾವ್, ನಿಧಿ ರಾವ್ ದುಡಿದಿದ್ದು, ರವಿ ಚಂದನ್ ಛಾಯಾ ಗ್ರಹಣ ನೀಡಿದ್ದಾರೆ. ಸಂಭಾಷಣೆ ಮತ್ತು ಸಾಹಿತ್ಯವನ್ನು ಡಿ.ಬಿ.ಸಿ. ಶೇಖರ್ ಬರೆದಿದ್ದು, ಚಿತ್ರ ಕಥೆ ಸಚಿನ್ ಶೆಟ್ಟಿ ಕುಂಬ್ಳೆ ವಹಿಸಿದ್ದಾರೆ. ನೃತ್ಯ ನಿರ್ದೇಶನ ಮದನ್ ಹರಿಣಿ ನಿರ್ವಹಿಸಿದ್ದು, ಸಂಕಲನ ನಾಸಿರ್ ಹಕೀಮ್, ಮುಂಬೈ ಮತ್ತು ದೇವಿಪ್ರಕಾಶ್ ಅವರು ಕಲೆ ಚಿತ್ರಕ್ಕಿದೆ. ವಿ. ಮನೋಹರ್, ಸಾಹಸ : ಮಾಸ್ ಮಾದ ಸಾಹಸ ನಿರ್ವಹಿಸಿದ್ದಾರೆ. ವ್ಯಾಸರಾಜ ಸೋಸಲೆ, ಅನುರಾಧ ಭಟ್, ಪ್ರಕಾಶ್ ಮಹಾದೇವನ್, ಸುಹಾನ ಸೈಯ್ಯದ್ ಹಾಡಿದ್ದಾರೆ. ಸಹ ನಿರ್ದೇಶನ ರಾಮ್ ದಾಸ್ ಸಸಿಹಿತ್ಲು ಮತ್ತು ವಿತರಕರಾಗಿ ಬಾಲಕೃಷ್ಣ ಶೆಟ್ಟಿ ಪುತ್ತೂರು ಕಾರ್ಯನಿರ್ವಹಿಸಿದ್ದಾರೆ ಎಂದರು.

ಹಾಸ್ಯಮಯ ಸನ್ನಿವೇಶಗಳೊಂದಿಗೆ ಯಾರದೋ ತಪ್ಪಿಗೆ ಇನ್ಯಾರೋ ಕಿರಿಕಿರಿ ಅನುಭವಿಸುವುದು, ಮಾಡಿದ ತಪ್ಪುಗಳನ್ನ ಸರಿಪಡಿಸಿಕೊಂಡು ಸತ್ಯದ ದಾರಿಯಲ್ಲಿ ಬಾಳುವುದೇ ಜೀವನ ಎಂಬ ಸಂದೇಶವನ್ನು ಸಾರುವ ಕತೆಯನ್ನು ಹೊಂದಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ರೋಶನ್ ವೇಗಸ್, ನಟ ಮೊಹಮ್ಮದ್ ನಯೀಮ್, ನಟಿ ಐಶ್ವರ್ಯ ಹೆಗ್ಡೆ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News