ಡಿ.22: ನಂದಿನಿ ಗೋಧಿ ಲಾಡು ಮಾರುಕಟ್ಟೆಗೆ
Update: 2021-12-21 22:49 IST
ಮಂಗಳೂರು, ಡಿ.21: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಂದಿನಿ ಸಿಹಿ ಉತ್ಪನ್ನಗಳ ಶ್ರೇಣಿಗೆ ನಂದಿನಿ ಗೋಧಿ ಲಾಡನ್ನು ಡಿ.21ರಂದು ನಗರದ ಕುಲಶೇಖರದಲ್ಲಿರುವ ಕೊರ್ಡೆಲ್ ಸಭಾಂಗಣದಲ್ಲಿ ಜರುಗಲಿರುವ 35ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ನಂದಿನಿ ಗೋಧಿ ಲಾಡು ಅತ್ಯುತ್ತಮ ಗುಣಮಟ್ಟದ ಗೋಧಿ ಹುಡಿ, ಶುದ್ಧತುಪ್ಪ, ಸಕ್ಕರೆ, ಏಲಕ್ಕಿ, ಗೋಡಂಬಿ, ಕೆನೆಭರಿತ ಹಾಲಿನ ಹುಡಿ ಬಳಸಿ ಆಧುನಿಕ ತಾಂತ್ರಿಕತೆಯಿಂದ ತಯಾರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು ತಿಳಿಸಿದ್ದಾರೆ.