×
Ad

ಉಡುಪಿ ಕ್ರಿಕ್‌ ಲರ್ನಿಂಗ್‌ಗೆ ಕೈರ ಕಿಕೆಟ್ ಟ್ರೋಫಿ

Update: 2021-12-22 19:43 IST

ಉಡುಪಿ, ಡಿ.22: ಶಿವಮೊಗ್ಗ ಜಿಲ್ಲೆ ಸಾಗರದ ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡೆಮಿಯ ಆಶ್ರಯದಲ್ಲಿ 16 ವರ್ಷ ವಯೋಮಿತಿಯೊಳಗಿನವರಿಗಾಗಿ ನಡೆದ ಕೈರ ಕ್ರಿಕೆಟ್ ಕಪ್-2021 ಟೂರ್ನಿಯನ್ನು ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್‌ನ ಕ್ರಿಕ್ ಲರ್ನಿಂಗ್ ತಂಡ ಗೆದ್ದುಕೊಂಡಿತು.

ತಲಾ 40 ಓವರುಗಳ ಅಂತಿಮ ಪಂದ್ಯದಲ್ಲಿ ಕ್ರಿಕ್ ಲರ್ನಿಂಗ್ ತಂಡ, ಸಾಗರ ತಂಡವನ್ನು ಎಂಟು ವಿಕೆಟ್‌ಗಳ ಅಂತರದಿಂದ ಪರಾಭವಗೊಳಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಸಾಗರ ತಂಡ ಅಂಶು ಅವರ ಶತಕ (123)ದ ನೆರವಿನಿಂದ 258 ರನ್‌ಗಳಿಸಿತು.

ಉತ್ತರವಾಗಿ ಕ್ರಿಕ್ ಲರ್ನಿಂಗ್ ತಂಡದ ಋಷಬ್ ಜವಾಬ್ದಾರಿಯುತ ಆಟದ ಮೂಲಕ ಅಜೇಯ 171 ರನ್‌ಗಳಿಸಿ ತಂಡವನ್ನು ಗೆಲುವಿನ ಗೆರೆ ದಾಟಿಸಿದರು. ಅವರು 7 ಸಿಕ್ಸರ್ ಮತ್ತು 25 ಬೌಂಡರಿಗಳನ್ನು ಬಾರಿಸಿದರು. ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಡಿದ ಋಷಬ್ ಸರಣಿ ಶ್ರೇಷ್ಠ, ಸಾಗರ ತಂಡದ ಅಂಶು ಉತ್ತಮ ಬ್ಯಾಟ್ಸ್‌ಮನ್ ಹಾಗೂ ಆರ್ಯನ್ ಉತ್ತಮ ಬೌಲರ್ ಪ್ರಶಸ್ತಿಯನ್ನು ಪಡೆದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗ ನಾರಾಯಣಪ್ಪ ವಿಜೇತರಿಗೆ ಬಹುಮಾನ ತರಿಸಿದರು. ಎನ್‌ಪಿಸಿಎ ಮುಖ್ಯಸ್ಥ ನಾಗೇಂದ್ರ, ಪಂಡಿತ್, ಮಹೇಶ್ ಕುಮಾರ್, ಶ್ರೀನಿವಾಸ ಕಾಳೆ, ಪಿ. ಅತ್ರಿ, ದಾಮೋದರ ಶಿವಮೊಗ್ಗ, ರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News