ಮಹಿಳೆ ನಾಪತ್ತೆ : ದೂರು
ಪುತ್ತೂರು: ಚಿತ್ರದುರ್ಗ ಜಿಲ್ಲೆಯಿಂದ ಪುತ್ತೂರಿಗೆ ಕೂಲಿ ಕೆಲಸಕ್ಕೆಂದು ಆಗಮಿಸಿದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಬುಧವಾರ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಬರಮಸಾಗರ ಹೋಬಳಿಯ ಕೋಡಿರಂಗನ ಹಳ್ಳಿ, ಮದರಾ ವಡ್ಡರಹಟ್ಟಿ ನಿವಾಸಿ ಪುರುಷೋತ್ತಮ ಎಂಬವರ ಪತ್ನಿ ಪವಿತ್ರ (23) ನಾಪತ್ತೆಯಾದ ಮಹಿಳೆ.
ಪವಿತ್ರ ಅವರು ತಮ್ಮ ಊರಿನಿಂದ ಕೂಲಿ ಕೆಲಸಕ್ಕಾಗಿ ತಮ್ಮ ತಾಯಿ ಹಾಗೂ ಸಹೋದರಿ ಜೊತೆ ಪುತ್ತೂರಿಗೆ ಬಂದಿದ್ದರು. ಪುತ್ತೂರು ತಾಲೂಕಿನ ಒಳಮೊಗರು ಗ್ರಾಮದ ಕುಂಬ್ರದಲ್ಲಿ ಟೆಂಟ್ ಹಾಕಿಕೊಂಡು ಈ ಕುಟುಂಬ ವಾಸವಾಗಿತ್ತು. ಇಲ್ಲಿ ಸರಿಯಾದ ಕೆಲಸ ಸಿಗದ ಕಾರಣ ಪವಿತ್ರ ಮತ್ತು ಅವರ ಸಹೋದರಿ ವನಜಾಕ್ಷಿ ಅವರು ಡಿ.20ರಂದು ರಾತ್ರಿ ಊರಿಗೆ ಮರಳಲೆಂದು ಪುತ್ತೂರು ಬಸ್ಸು ನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪವಿತ್ರ ಅವರು ಕಾಣೆಯಾಗಿದ್ದಾರೆ ಎಂದು ಅವರ ತಾಯಿ ಮಂಜಮ್ಮ ಅವರು ದೂರು ನೀಡಿದ್ದಾರೆ.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.