ಶ್ರೀಲಂಕಾ: ದಾಖಲೆ ಮಟ್ಟಕ್ಕೆ ಹಣದುಬ್ಬರ‌

Update: 2021-12-22 17:06 GMT
ಸಾಂದರ್ಭಿಕ ಚಿತ್ರ:PTI

ಕೊಲಂಬೊ, ಡಿ.22: ಶ್ರೀಲಂಕಾದಲ್ಲಿ ಆರ್ಥಿಕ ವ್ಯವಸ್ಥೆಯ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿರುವಂತೆಯೇ ನವೆಂಬರ್‌ನಲ್ಲಿ ಹಣದುಬ್ಬರ ದಾಖಲೆ ಮಟ್ಟವಾದ 11.1%ಕ್ಕೆ ತಲುಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಹುತೇಕ ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಶ್ರೀಲಂಕಾದ ಅರ್ಥವ್ಯವಸ್ಥೆಗೆ ಕೊರೋನ ಸೋಂಕು ಬಲವಾದ ಹೊಡೆತ ನೀಡಿದೆ. ಈ ಮಧ್ಯೆ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಹೆಚ್ಚಿಸುವ ಉದ್ದೇಶದಿಂದ ಸರಕಾರ ಆಮದಿನ ಮೇಲೆ ನಿಷೇಧ ವಿಧಿಸಿರುವುದರಿಂದ ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆ ಕಾಣಿಸಿಕೊಂಡಿದೆ. ಅಂಗಡಿಗಳಲ್ಲಿ ಹಾಲಿನ ಪೌಡರ್, ಸಕ್ಕರೆ, ಬೇಳೆಕಾಳುಗಳನ್ನು ಖರೀದಿಸುವುದಕ್ಕೆ ಮಿತಿ ಹೇರಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಹಾರ ವಸ್ತುಗಳ ಬೆಲೆಯಲ್ಲಿ 17% ಹೆಚ್ಚಳವಾಗಿದೆ. ಆಹಾರ ಪಡಿತರಕ್ಕೆ ಇನ್ನಷ್ಟು ಮಿತಿ ಹೇರುವ ಸಾಧ್ಯತೆಯಿದ್ದು ಆಹಾರ ನೆರವಿನ ಅತ್ಯಗತ್ಯವಿರುವವರಿಗೆ ಸಹಾಯ ಮಾಡಲು ವಿದೇಶದ ನೆರವು ಕೋರಲು ನಿರ್ಧರಿಸಲಾಗಿದೆ ಎಂದು ಕೃಷಿ ಇಲಾಖೆಉ ಕಾರ್ಯದರ್ಶಿ ಉದಿತ್ ಜಯಸಿಂಘೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News