×
Ad

ಮೇಲಂಗಡಿ: ರಿಫಾಯೀ ಮೌಲಿದ್ ಮಜ್ಲಿಸ್, ಮಾಸಿಕ ಬಡತನ ವೇತನ ವಿತರಣಾ ಕಾರ್ಯಕ್ರಮ

Update: 2021-12-22 23:51 IST

ಮೇಲಂಗಡಿ: ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ವತಿಯಿಂದ ರಿಫಾಯೀ ಡೇ ಪ್ರಯುಕ್ತ ರಿಫಾಯೀ ಮೌಲಿದ್ ಮಜ್ಲಿಸ್ ಮತ್ತು ಮಾಸಿಕ ಬಡತನ ವೇತನ ವಿತರಣಾ ಕಾರ್ಯಕ್ರಮ ಮೇಲಂಗಡಿಯ ತಾಜುಲ್ ಉಲಮಾ ಆಡಿಟೋರಿಯಂ ನಲ್ಲಿ ಇತ್ತೀಚೆಗೆ ನಡೆಯಿತು.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ ಸಭೆಯ ನೇತೃತ್ವ ವಹಿಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್, ಮೇಲಂಗಡಿ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಖಲೀಲ್, ಬ್ರಾಂಚ್ ಕೋಶಾಧಿಕಾರಿ ಅಬ್ದುಲ್ ಸಮದ್, ಝೈನುದ್ದೀನಾಕ, ಫಾರೂಖ್ ಯು.ಕೆ, ಅಬ್ದುಲ್ ಸತ್ತಾರ್, ಅಶ್ರಫ್, ಮುಹಮ್ಮದಾಕ, ಮುಹಮ್ಮದ್ ಅಲಿ, ಹಾಗು ಅಬ್ಬಾಸ್ ಹಾಜಿ ಉಪಸ್ಥಿತರಿದ್ದರು.

ಮೇಲಂಗಡಿ ಬ್ರಾಂಚ್ ಇಸಾಬಃ ಕಾರ್ಯದರ್ಶಿ ಅಬ್ದುಲ್ ಖಾದರ್ ಜೀಲಾನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News