ಮಂಗಳೂರು: ಶ್ರೀ ಗಣೇಶ್ ಆ್ಯಂಬುಲೆನ್ಸ್ ಮಾಲಕ ಗಂಗಾಧರ್ ಅತ್ತಾವರ ನಿಧನ
Update: 2021-12-23 10:01 IST
ಮಂಗಳೂರು, ಡಿ.23: ನಗರದ ಅತ್ತಾವರ ನಿವಾಸಿ, ಶ್ರೀ ಗಣೇಶ್ ಆ್ಯಂಬುಲೆನ್ಸ್ ಮಾಲಕ ಗಂಗಾಧರ್ ಅತ್ತಾವರ (62) ಬುಧವಾರ ತಡರಾತ್ರಿ ನಿಧನರಾಗಿದ್ದಾರೆ.
ಮೂರು ದಿನಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದ ಅವರನ್ನು ನಗರದ ಹೈಲ್ಯಾಂಡ್ ಮತ್ತು ಕೆಎಂಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ 12:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಕೇವಲ ಒಂದು ಆ್ಯಂಬುಲೆನ್ಸ್ ಮೂಲಕ ಶ್ರೀ ಗಣೇಶ್ ಆ್ಯಂಬುಲೆನ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ಗಂಗಾಧರ ಅವರು 35 ವರ್ಷಗಳಲ್ಲಿ 18ಕ್ಕೂ ಅಧಿಕ ಆ್ಯಂಬುಲೆನ್ಸ್ ಗಳನ್ನು ಹೊಂದಿದ್ದರು. ಅನೇಕ ಚಾಲಕರಿಗೆ ಉದ್ಯೋಗ ನೀಡಿದ್ದರು. ಕೋವಿಡ್ 19 ಸಂದರ್ಭ ಸಮಾರೋಪಾದಿಯಲ್ಲಿ ಸೇವೆ ಸಲ್ಲಿಸಿ ಗಮನ ಸೆಳೆದಿದ್ದರು.