×
Ad

ಅಝಾನ್ ಅರ್ಥ ದುರ್ವ್ಯಾಖಾನದ ಆರೋಪ: ಹಾರಿಕಾ ಮಂಜುನಾಥ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Update: 2021-12-23 11:44 IST

ಬೆಳ್ತಂಗಡಿ, ಡಿ.23: ವಿಶ್ವ ಹಿಂದೂ ಪರಿಷತ್ ಹಾಗೂ ದುರ್ಗಾವಾಹಿನಿ ವತಿಯಿಂದ ಇತ್ತೀಚೆಗೆ ನಗರದಲ್ಲಿ ನಡೆದ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಹಾರಿಕಾ ಮಂಜುನಾಥ್ ಎಂಬವರು ಅಝಾನ್ ನ ಅರ್ಥವನ್ನು ದುರ್ವ್ಯಾಖಾನ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನೀಡಿರುವ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಡಿಸೆಂಬರ್ 13ರಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃ ಮಂಡಳಿ, ದುರ್ಗಾ ವಾಹಿನಿ ಬೆಳ್ತಂಗಡಿಯಲ್ಲಿ ಆಯೋಜಿಸಿದ್ದ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಹಾರಿಕಾ ಮಂಜುನಾಥ್ ಭಾಷಣ ಮಾಡುತ್ತಾ ಅಝಾನ್ ನ ಬಗ್ಗೆ ದುರ್ವಾಖ್ಯಾನ ಮಾಡಿ ಅಝಾನ್ ನಲ್ಲಿ ಕಾಫಿರ್ ಗಳನ್ನು ಅಥವಾ ಮುಸ್ಲಿಮೇತರನ್ನು ಕೊಲ್ಲಲು ಕರೆ ನೀಡಲಾಗುತ್ತದೆ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಆ ಮೂಲಕ ಹಿಂದು-ಮುಸ್ಲಿಮರ ನಡುವೆ ಭಿನ್ನತೆಯನ್ನು ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸಿದ್ದಾರೆ ಎಂದು ಪಿಎಫ್ ಐ ಸದಸ್ಯ ಶಬೀರ್ ಎಂಬವರು ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಾರಿಕಾ ಮಂಜುನಾಥ್ ಪ್ರಚೋದನಕಾರಿ ಭಾಷಣದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹಲವಾರು ಮುಸ್ಲಿಂ ಸಂಘಟನೆಗಳ ಮುಖಂಡರು, ಹಲವು ಮಸೀದಿಗಳ ಸಮಿತಿ ಸದಸ್ಯರು ಈಗಾಗಲೇ ಪೋಲಿಸ್ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News