ಕನ್ಯಾನ: ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ವತಿಯಿಂದ ಮಾಹಿತಿ ಕಾರ್ಯಾಗಾರ
Update: 2021-12-23 12:40 IST
ವಿಟ್ಲ, ಡಿ.23: ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ವತಿಯಿಂದ ಜಮಾಅತ್ ನಿರ್ವಹಣೆಯ ಬಗ್ಗೆ ಮಾಹಿತಿ ಕಾರ್ಯಾಗಾರವು ಕನ್ಯಾನ ಸಮೀಪದ ಕಬ್ಬಿಣಮೂಲೆ ತ್ವಾಹ ಜುಮಾ ಮಸೀದಿಯಲ್ಲಿ ಬುಧವಾರ ನಡೆಯಿತು.
ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನೋಟರಿ ಅಬೂಬಕರ್ ವಿಟ್ಲ ಕಾರ್ಯಾಗಾರ ನಡೆಸಿಕೊಟ್ಟರು. ಸ್ಥಳೀಯ ಖತೀಬ್ ಅಶ್ರಫ್ ಮದನಿ ದುಆ ನೆರವೇರಿಸಿದರು.
ಮಸೀದಿಯ ಅಧ್ಯಕ್ಷ ಅಬ್ದುಲ್ಲಾ, ಪ್ರಧಾನ ಕಾರ್ಯದರ್ಶಿ ಉಸ್ಮಾನ್, ಕೋಶಾಧಿಕಾರಿ ಅಝೀಝ್ ಸೇರಾಜೆ, ಪ್ರಮುಖರಾದ ಇಬ್ರಾಹೀಂ ಕೆ.ಎಸ್., ಲತೀಫ್ ನೇರಳಕಟ್ಟೆ ಉಪಸ್ಥಿತರಿದ್ದರು.
ಮೂಸಬ್ಬ ಕಲಾಯಿ ಸ್ವಾಗತಿಸಿ, ವಂದಿಸಿದರು.