ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಕೆ.ಈಶ್ವರನ್ ನಿಧನ
ಉಡುಪಿ, ಡಿ.23: ಸ್ಥಳೀಯ ಮಹಾತ್ಮಾಗಾಂಧಿ ಮೆಮೋರಿಯಲ್ ಕಾಲೇಜಿನ ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರಾದ ಪ್ರೊ. ಕೆ.ಕೆ ಈಶ್ವರನ್ (92) ಅವರು ಡಿ.23ರಂದು ಬೆಂಗಳೂರಿನಲ್ಲಿ ತಮ್ಮ ಬಂಧುಗಳ ಮನೆಯಲ್ಲಿ ನಿಧನರಾದರು.
1929ರಲ್ಲಿ ಗುರುವಾಯೂರಲ್ಲಿ ಜನಿಸಿದ ಅವರು ಚೆನ್ನೈ, ಅಣ್ಣಾಮಲೈಗಳಲ್ಲಿ ಶಿಕ್ಷಣ ಪಡೆದು ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದರು. 1958ರಲ್ಲಿ ಎಂಜಿಎಂ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಪ್ರಾರಂಭಗೊಂಡಾಗ ಸಸ್ಯಶಾಸ್ತ್ರದ ಉಪನ್ಯಾಸಕ ರಾಗಿ ಸೇರಿಕೊಂಡ ಅವರು ತಮ್ಮ 30 ವರ್ಷಗಳ ಸೇವಾವಧಿಯಲ್ಲಿ ವಿಭಾಗ ವನ್ನು ಅತ್ಯಂತ ಶ್ರೇಷ್ಠ ಮಟ್ಟಕ್ಕೆ ಬೆಳೆಸಿದರು. ತಮ್ಮ ಸೇವಾವಧಿಯಲ್ಲಿ ಸಸ್ಯ ವೀಕ್ಷಣ ಹಾಗೂ ಸಂಗ್ರಹಣ ಕಾರ್ಯಗಳನ್ನು ಅವಿರತವಾಗಿ ನಡೆಸಿ ಉನ್ನತ ಮಟ್ಟದ ಸಸ್ಯೋದ್ಯಾನ ಹಾಗೂ ಮ್ಯೂಸಿಯಂಗಳನ್ನು ಬೆಳೆಸಿದ ಹಿರಿಮೆ ಈಶ್ವರನ್‌ರದು.
ತಮ್ಮ ಸೇವಾವಧಿಯ ಕೊನೆಯ ನಾಲ್ಕು ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಅವರು ನಿವೃತ್ತರಾದರು. ಅಪ್ಯಾಯಮಾನ ಬೋಧನಾ ಶೈಲಿಯಿಂದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕರಾಗಿದ್ದರು. ಅರ್ಪಣಾಭಾವ, ತನ್ಮಯತೆ, ಸ್ನೇಹಶೀಲತೆ, ಶಿಸ್ತು,ಪ್ರಾಮಾಣಿಕತೆಗಳು ಅವರ ಜೀವನದ ಅವಿಭಾಜ್ಯ ಅಂಗ ಗಳು. ಪ್ರಾಂಶುಪಾಲರಾಗಿದ್ದಾಗ ಕಾಲೇಜಿನಲ್ಲಿ ಹೋಂಸೈನ್ಸ್ ವಿಭಾಗ ಪ್ರಾರಂಭಿ ಸಿದರು. ಕಂಪ್ಯೂಟರ್ ಸೈನ್ಸ್ ವಿಭಾಕ್ಕೂ ಭದ್ರ ತಳಪಾಯ ಹಾಕಿದ್ದರು.