×
Ad

ತುಳು ಪಾಡ್ದನಗಳ ಸಮೀಕ್ಷೆ: ಕನ್ನಡ ಪ್ರಬಂಧ ಸ್ಪರ್ಧೆ

Update: 2021-12-23 18:46 IST

ಉಡುಪಿ, ಡಿ.23: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಸಹಯೋಗದೊಂದಿಗೆ ಸ್ವಾತಂತ್ರ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ಕನ್ನಡ ವಿದ್ಯಾರ್ಥಿಗಳಲ್ಲಿ ತುಳು ಪಾಡ್ದನಗಳ ಕುರಿತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ತುಳು ಪಾಡ್ದನಗಳ ಸಮೀಕ್ಷೆ ಕನ್ನಡ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ದೇಶದ ಯಾವುದೇ ಕಾಲೇಜಿನ ಪಿಯುಸಿ, ಪದವಿ ವಿದ್ಯಾರ್ಥಿಗಳು ಭಾಗ ವಹಿಸಬಹುದು. ಒಂದು ತುಳು ಪಾಡ್ದನದ ಸಾರಾಂಶ, ಐತಿಹಾಸಿಕ, ಸಾಮಾ ಜಿಕ, ಜಾನಪದ, ಸ್ತ್ರೀವಾದಿ ಅಂಶಗಳು ಮತ್ತು ಭಾಷೆಯ ಸೊಗಸಿನ ಕುರಿತು ಸಮೀಕ್ಷೆ ಬರೆಯಬೇಕು. ಫುಲ್ ಸ್ಕೇಪ್‌ನಲ್ಲಿ ಕನಿಷ್ಠ ಎಂಟು ಪುಟಗಳು ಬರೆಯ ಬೇಕು. ಪ್ರಬಂಧವನ್ನು ಡಿಪಿಐ ಅಥವಾ ಕೈಬರಹದಲ್ಲಿ ಪ್ರೊ.ಮುರಳೀಧರ ಉಪಾಧ್ಯ, ಸಖೀಗೀತ, ಎಂಐಜಿ 1, ದೊಡ್ಡಣಗುಡ್ಡೆ, ಉಡುಪಿ- 576102 ಈ ವಿಳಾಸಕ್ಕೆ ಕಳುಹಿಸಬೇಕು. ಪ್ರಬಂಧ ತಲುಪಿಸಲು ಜ.25 ಕೊನೆಯ ದಿನಾಂಕ ವಾಗಿದೆ. ವಿಜೇತರಿಗೆ ಪ್ರಥಮ 2000ರೂ., ದ್ವೀತಿಯ 1500ರೂ., ತೃತೀಯ 1000ರೂ. ನಗದು ಬಹುಮಾನ ನೀಡಲಾಗುವುದು. ಮೆಚ್ಚುಗೆ ಪಡೆದ ಪ್ರಬಂಧಗಳಿಗೆ ಪುಸ್ತಕ ಬಹುಮಾನ ನೀಡಲಾಗುವುದು ಎಂದು ಅಕಾಡಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ ಸಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News