×
Ad

ವಕ್ಫ್ ಬೋರ್ಡ್ ಸರಿಯಾದ ಮಾರ್ಗದರ್ಶನ ನೀಡಲಿ : ಎಂ.ಪಿ.ಮೊಯಿದಿನಬ್ಬ

Update: 2021-12-23 18:47 IST

ಉಡುಪಿ, ಡಿ.23: ಮಸೀದಿಗಳ ಧ್ವನಿ ವರ್ದಕಗಳನ್ನು ರಾಜ್ಯದಲ್ಲಿ ತೆರವು ಗೊಳಿಸಲು ನ್ಯಾಯಾಲಯದ ಆದೇಶದಂತೆ ಕಾನೂನು ಪಾಲಕರು ಮುಂದಾ ಗುತ್ತಿದ್ದಾರೆ. ಈ ಬಗ್ಗೆ ವಕ್ಫ್ ಬೋರ್ಡ್ ಸಮಾಜಕ್ಕೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಹೇಳಿದ್ದಾರೆ.

ಕರ್ನಾಟಕ ವಕ್ಫ್ ಮಂಡಳಿಗೆ ಪ್ರತಿ ಧಾವೆ ಹೂಡಲು ಅವಕಾಶ ಇದೆ. ಮಸೀದಿಗಳಲ್ಲಿ ಸಣ್ಣ ಪುಟ್ಟ ತಕರಾರು ಉಂಟಾದರೆ ಆ ಕೂಡಲೇ ಮಸೀದಿಗಳ ಆಡಳಿತಾಧಿಕಾರವನ್ನು ಕೈಗೆತ್ತಿಕೊಳ್ಳುವ ವಕ್ಫ್ ಬೋರ್ಡ್ ಈ ಸಮಸ್ಯೆಯ ಬಗ್ಗೆ ದಿವ್ಯ ಮೌನಕ್ಕೆ ಜಾರಿರುವುದು ಸರಿಯಲ್ಲ. ರಾಜ್ಯದಾದ್ಯಂತ ಗೊಂದಲ ನಿರ್ಮಾಣವಾಗಿದ್ದು ರಾಜ್ಯ ವಕ್ಫ್ ಮಂಡಳಿಯು ಕೂಡಲೇ ಗೊಂದಲ ನಿವಾರಣೆಗೆ ಮುಂದಾಗಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News