ಬಂಟಕಲ್: ರಾಷ್ಟ್ರೀಯ ಗಣಿತ ಶಾಸ್ತ್ರ ದಿನಾಚರಣೆ
Update: 2021-12-23 18:50 IST
ಶಿರ್ವ, ಡಿ.23: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಿತಶಾಸ್ತ್ರ ವಿಭಾಗವು ಕಾಲೇಜಿನ ಐಎಸ್‌ಟಿಇ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ಶ್ರೀನಿವಾಸ ರಾಮಾನುಜನ್ ಅವರ 134ನೆ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತಶಾಸ್ತ್ರ ದಿನನ್ನು ಡಿ.22ರಂದು ಆಚರಿಸಲಾಯಿತು.
ಸುರತ್ಕಲ್‌ನ ಎನ್‌ಐಟಿಕೆಯ ಗಣಿತ ಮತ್ತು ಗಣಕ ಯಂತ್ರ ವಿಭಾಗದ ಪ್ರಾಧ್ಯಾಪಕ ಡಾ.ಬಿಆರ್.ಶಂಕರ್, ಶ್ರೀನಿವಾಸ ರಾಮಾನುಜನ್: ಜೀವನ ಮತ್ತು ಪರಂಪರೆ ಎಂಬ ಶಿರ್ಷಿಕೆಯಡಿ ಉಪನ್ಯಾಸ ನೀಡಿದರು.
ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಲೊಲಿಟ ಪ್ರಿಯ ಕ್ಯಾಸ್ಟೆಲಿನೋ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರುತಾ ಭಟ್ ಮುಖ್ಯ ಅತಿಥಿಯನ್ನು ಪರಿಚಯಿಸಿ ದರು. ಗಣಕಯಂತ್ರ ವಿಭಾಗದ ವಿದ್ಯಾರ್ಥಿ ಭಾರ್ಗವ ರಾಮ್ ಅವರಿಂದ ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೆ ರಸಪ್ರಶ್ನೆಯನ್ನು ನಡೆಸಲಾಯಿತು. ಅನನ್ಯಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.