ಉಡುಪಿ ಮಹಾಲಕ್ಷ್ಮೀ ಬ್ಯಾಂಕಿನ ಡೈರಿ ಬಿಡುಗಡೆ
ಉಡುಪಿ, ಡಿ.23: ಉಡುಪಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಇದರ 2022ನೇ ಸಾಲಿನ ಡೈರಿಯನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಬಿಡುಗಡೆಗೊಳಿಸಿದರು.
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಬ್ಯಾಂಕಿನ ವತಿಯಿಂದ ಮಂಜೂರಾದ 30 ಲಕ್ಷ ದೇಣಿಗೆಯ ದ್ವಿತೀಯ ಹಂತದ 5 ಲಕ್ಷದ ಚೆಕ್ಕನ್ನು ನಾಡೋಜ ಡಾ.ಜಿ.ಶಂಕರ್ ಅವರಿಗೆ ಹಸ್ತಾಂತರಿಸಲಾಯಿತು. ಅಧ್ಯಕ್ಷತೆ ಯನ್ನು ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಮತ್ತು ಬ್ಯಾಂಕಿನ ಲೆಕ್ಕಪರಿಶೋಧಕರಾದ ಸಿಎ ಗಣೇಶ್ ಬಿ.ಕಾಂಚನ್ ಮಾತನಾಡಿದರು. ನಿರ್ದೇಶಕರಾದ ವೆಂಕಟರಮಣ ಕಿದಿಯೂರು, ವಾಸುದೇವ ಸಾಲ್ಯಾನ್, ಶಶಿಕಾಂತ ಕೋಟ್ಯಾನ್, ಹೇಮನಾಥ ಪುತ್ರನ್, ಶೋಭೇಂದ್ರ ಸಸಿಹಿತ್ಲು, ಸಂಜೀವ ಶ್ರೀಯಾನ್, ರಾಮ ನಾಯ್ಕಾ, ವಿನಯ ಕರ್ಕೇರ, ನಾರಾಯಣ ಅಮೀನ್, ಸುರೇಶ್ ಬಿ ಕರ್ಕೇರ, ಬಿ.ಬಿ.ಕಾಂಚನ್, ಶಿವರಾಮ ಕುಂದರ್, ವನಜಾ ಕಿದಿಯೂರು, ವನಜಾ ಪುತ್ರನ್, ಮಂಜುನಾಥ ಎಸ್.ಕೆ., ಬ್ಯಾಂಕಿಂಗ್ ಸಲಹೆಗಾರ ಆನಂದ ಪುತ್ರನ್, ಪ್ರಧಾನ ವ್ಯವಸ್ಥಾಪಕ ಜಿ.ಕೆ.ಶೀನಾ ಉಪಸ್ಥಿತರಿದ್ದರು.