‘ಮೊಬೈಲ್ ತಂತ್ರಾಂಶದ ಮಾಹಿತಿ ಅಪರಿಚಿತರೊಡನೆ ಹಂಚಿಕೊಳ್ಳಬೇಡಿ’

Update: 2021-12-23 13:29 GMT

ಶಿರ್ವ, ಡಿ.23: ನಮ್ಮ ಖಾಸಗಿ ಮಾಹಿತಿಗಳು ಕ್ಲೌಡ್ ಸರ್ವರ್‌ಗಳಲ್ಲಿ ಶೇಖರವಾಗಿರುವುದರಿಂದ ಅವು ಸುರಕ್ಷಿತವಲ್ಲ. ಯಾವುದೇ ಮೊಬೈಲ್ ತಂತ್ರಾಂಶಗಳನ್ನು ಉಪಯೋಗಿಸುವಾಗ ಮಾಹಿತಿಗಳನ್ನು ಅಪರಿಚಿತರೊಡನೆ ಹಂಚಿಕೊಳ್ಳಬಾರದು. ನಮಗೆ ಬರುವ ಇ-ಮೇಲ್ ಮತ್ತು ಎಸ್‌ಎಂಎಸ್‌ಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕಿ ಪ್ರೊ.ರಾಜಶ್ರೀ ನಂಬಿಯಾರ್ ತಿಳಿಸಿದ್ದಾರೆ.

ಕುತ್ಯಾರು ಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲಿನಲ್ಲಿ ಗುರುವಾರ ಆಯೋಜಿಸಲಾದ ಸೈಬರ್ ಸುರಕ್ಷತಾ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು. ಒಟಿಪಿ, ಸಿವಿವಿ, ಮತ್ತು ಪಿನ್‌ಗಳನ್ನು ಬ್ಯಾಂಕ್‌ನವರು ಕರೆಮಾಡಿ ಕೇಳುವು ದಿಲ್ಲ. ಬಳಕೆದಾರರು ವಿವೇಚನೆಯಿಂದ ವ್ಯವಹರಿಸಿ ತಮಗಾಗುವ ಹಾನಿಯನ್ನು ತಪ್ಪಿಸಿಕೊಳ್ಳಬಹುದು. ಫೇಸ್‌ಬುಕ್‌ನ ನಕಲಿ ಅಕೌಂಟ್‌ಗಳಿಂದ, ಇ-ಮೇಲ್‌ಗಳಿಂದ ಬರುವ ಲಿಂಕ್ಗಳನ್ನು ನಿರ್ಲಕ್ಷಿಸ ಬೇಕು ಎಂದರು.

ಸಂಸ್ಥೆಯ ಸ್ಥಾಪಕಾಧ್ಯಕ್ಷ ವಿದ್ವಾನ್ ಶಂಭುದಾಸ್ ಗುರೂಜಿ ಅಧ್ಯಕ್ಷತೆ ವಹಿಸಿ ದ್ದರು. ಪ್ರಿನ್ಸಿಪಾಲ್ ಗುರುದತ್ ಸೋಮಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕಾರ್ಯದರ್ಶಿ ಶಾರದಾ ಕುತ್ಯಾರು, ಉದ್ಯಮಿ ದೀಪಕ್ ಕಾಮತ್, ಚಂದ್ರಿಕಾ ಪೂಜಾರಿ, ಅಕ್ಷತಾ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಸಂಗೀತಾ ಪರಿಚಯಿಸಿದರು. ಶ್ರುತಿ ಆಚಾರ್ಯ ಸ್ವಾಗತಿಸಿದರು. ದೀಪಾ ಮೋಹನ್ ವಂದಿಸಿದರು. ಶಿಕ್ಷಕಿ ರಮ್ಯಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News