×
Ad

ಬಂಟ್ವಾಳ ಮೂಲದ ವ್ಯಕ್ತಿಗೆ ಒಮೈಕ್ರಾನ್ ಸೋಂಕು; ದ.ಕ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7ಕ್ಕೇರಿಕೆ

Update: 2021-12-23 20:26 IST

ಮಂಗಳೂರು, ಡಿ.23: ಘಾನಾದಿಂದ ದುಬೈ ಮೂಲಕ ಮಂಗಳೂರಿಗೆ ಬಂದಿದ್ದ ಬಂಟ್ವಾಳ ಮೂಲದ ವ್ಯಕ್ತಿಯೊಬ್ಬರಿಗೆ ಒಮೈಕ್ರಾನ್ ಸೋಂಕಿರುವುದು ಖಚಿತಗೊಂಡಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿ.16ರಂದು ನಡೆಸಲಾದ ರ್‍ಯಾಪಿಡ್ ಆರ್‌ಟಿಪಿಸಿಆರ್‌ನಲ್ಲಿ ಈ ವ್ಯಕ್ತಿ ಪಾಸಿಟಿವ್ ಆಗಿದ್ದರು. ತಕ್ಷಣ ಅವರನ್ನು ವೆನ್ಲಾಕ್‌ನಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿತ್ತು. ಅಲ್ಲದೆ ಡಿ.17ರಂದು ಅವರ ಸ್ಯಾಂಪಲ್‌ನ್ನು ಬೆಂಗಳೂರಿಗೆ ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿತ್ತು.

ಈ ವ್ಯಕ್ತಿ ಯಾವುದೇ ರೋಗ ಲಕ್ಷಣಗಳನ್ನು ಹೊಂದಿಲ್ಲ. ಒಮೈಕ್ರಾನ್ ಪ್ರೊಟೊಕಾಲ್ ಪ್ರಕಾರ ಡಿ.24 ಮತ್ತು 25ರಂದು ಎರಡು ಬಾರಿ ಆರ್‌ಟಿಪಿಸಿಆರ್ ಟೆಸ್ಟ್‌ಗೆ ಒಳಪಡಿಸಲಾಗುವುದು. ಅವರ ಎಲ್ಲಾ 17 ಪ್ರಾಥಮಿಕ ಸಂಪರ್ಕದರನ್ನೂ ಕೂಡ ಟೆಸ್ಟ್ ಮಾಡಲಾಗಿದೆ. ಅವರೆಲ್ಲರ ವರದಿಯು ನೆಗೆಟಿವ್ ಆಗಿದೆ. ಅಲ್ಲದೆ ಅವರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದ್ದು 8ನೇ ದಿನದಂದು ಮತ್ತೆ ಟೆಸ್ಟ್‌ಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧೀಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಈ ಮೂಲಕ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ 7ಕ್ಕೇರಿದೆ. ಎಲ್ಲರೂ ಆರೋಗ್ಯವಾಗಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ಆರೋಗ್ಯ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News