ಮಣಿಪಾಲ: ಗ್ರಾಮ ಒನ್ ಯೋಜನೆಗೆ ತರಬೇತಿ
Update: 2021-12-23 21:30 IST
ಉಡುಪಿ, ಡಿ.23: ಗ್ರಾಮ ಒನ್ ಯೋಜನೆ ಅನುಷ್ಠಾನಕ್ಕೆ ಆಯ್ಕೆಗೊಂಡ 162 ಗ್ರಾಮ ಒನ್ ಯೋಜನೆಯ ಫ್ರಾಂಚೈಸಿಗಳಿಗೆ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಕ್ರಮ ವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಇಡಿಸಿಎಸ್ ಯೋಜನಾ ನಿರ್ದೇಶಕರು, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ನೋಡಲ್ ಅಧಿಕಾರಿ ಹಾಗೂ ಗ್ರಾಮ ಒನ್ ಯೋಜನೆಯ ಸಹಾಯಕ ಕಮಿಷನರ್ ಮತ್ತು ಕಾರ್ಮಿಕ ಅಧಿಕಾರಿ ಕುಮಾರ್ ಉಪಸ್ಥಿತರಿದ್ದರು.