×
Ad

ಅನೈತಿಕ ಪೊಲೀಸ್‌ ಗಿರಿ ತಡೆಗಟ್ಟಲು ‘ಮಂಗಳೂರು ಸಿವಿಕ್ ಗ್ರೂಪ್’ ಮನವಿ

Update: 2021-12-23 22:19 IST

ಮಂಗಳೂರು, ಡಿ.23: ನಗರ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನೈತಿಕ ಪೊಲೀಸ್‌ ಗಿರಿಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಮಂಗಳೂರು ಸಿವಿಕ್ ಗ್ರೂಪ್‌ನ ಪ್ರತಾಪ್‌ ಚಂದ್ರ ಕೆದಿಲಾಯ, ಸುರೇಶ್ ನಾಯಕ್, ಭಾಸ್ಕರ್ ಕಿರಣ್, ಓಸ್ವಾಲ್ಡ್ ಪಿರೇರಾ ಅವರನ್ನು ಒಳಗೊಂಡ ನಿಯೋಗವು ಪೊಲೀಸ್ ಆಯುಕ್ತರಿಗೆ ಇತ್ತೀಚೆಗೆ ಮನವಿ ಸಲ್ಲಿಸಿತು.

ಅನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರೂ ಕೆಲವೇ ದಿನದೊಳಗೆ ಜಾಮೀನಿನ ಮೇಲೆ ಹೊರಗೆ ಬರುತ್ತಾರೆ. ಇದರಿಂದ ಆರೋಪಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿದೆ. ಹಾಗಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News