×
Ad

ಮಹಿಳೆ ಕಾಣೆ

Update: 2021-12-23 22:24 IST

ಮಂಗಳೂರು, ಡಿ.23: ನಗರದ ಬಿಜೈ ನ್ಯೂ ರೋಡ್‌ನ ಆನೆಗುಂಡಿಯ ಲೋಬೋ ಕಾಂಪೌಂಡ್ ನಿವಾಇ ಸೊನಾಲಿ ಜಾಸ್ಮಿನ್ ಡಿಸೋಜ (27) ಎಂಬಾಕೆಯ ಡಿ.22ರಿಂದ ಕಾಣೆಯಾಗಿದ್ದಾರೆ.

ಬುಧವಾರ ಸಂಜೆ 6 ಗಂಟೆಗೆ ಸೋನಾಲಿಯ ತಂದೆ ಸ್ನಾನಕ್ಕೆ ಹೋದ ವೇಳೆ ಸೋನಾಲಿಯು ಮನೆಯ ಬಾಗಿಲು ಹೊರಗಡೆಯಿಂದ ಹಾಕಿ ಕಾಣೆಯಾಗಿದ್ದಾರೆ. 6:15ಕ್ಕೆ ಸ್ನಾನಮುಗಿಸಿ ಹೊರ ಬಂದಾಗ ಮನೆಯೊಳಗೆ ಮಗಳು ಸೋನಾಲಿ ಇರಲಿಲ್ಲ. ಅದರಂತೆ ಹುಡುಕಾಡಿದಾಗ ಮನೆಯ ಮುಖ್ಯ ಬಾಗಿಲನ್ನು ಹೊರಗಡೆಯಿಂದ ಲಾಕ್ ಮಾಡಿರುವುದು ಕಂಡು ಬಂತು. ಬಳಿಕ ನೆರೆಮನೆಯವರ ಸಹಾಯದಿಂದ ಬಾಗಿಲನ್ನು ತೆಗೆಸಿ ಆಸುಪಾಸು ಮತ್ತು ಸಂಬಂಧಿಕರ ಮನೆಯಲ್ಲಿ ಹುಡುಕಾಡಿ ಎಲ್ಲಿಯೂ ಸಿಗದ ಕಾರಣ ಗುರುವಾರ ಉವ ಠಾಣೆಗೆ ದೂರು ನೀಡಲಾಗಿದೆ.

ಕಾಣೆಯಾದವರ ಸೊನಾಲಿಯು 5 ಅಡಿ ಎತ್ತರವಿದ್ದು, ಗೋಧಿ ಮೈ ಬಣ್ಣ ಹೊಂದಿದ್ದಾರೆ. ಬಲಗೈಯಲ್ಲಿ ಸೋನು ಎಂಬ ಟ್ಯಾಟು ಬರೆಯಲಾಗಿದೆ. ಕನ್ನಡ, ಹಿಂದಿ, ಇಂಗ್ಲಿಷ್, ಕೊಂಕಣಿ ಮಾತನಾಡುತ್ತಿದ್ದು, ಈ ಹಿಂದೆಯೂ ಎರಡ್ಮೂರು ಬಾರಿ ನಾಪತ್ತೆಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News