‘ಧರ್ಮವು ಸುಮನಸ್ಕರಿಗೆ ಶಾಂತಿ ಸಮಾಧಾನದ ನೆಲೆ’ ಕಾರ್ಯಕ್ರಮ
Update: 2021-12-23 22:38 IST
ಮಂಗಳೂರು : ಮಂಗಳೂರು ವಿವಿಯ ಕ್ರಿಶ್ಚಿಯಾನಿಟಿ ಪೀಠ ಹಾಗೂ ಸಂತ ಆಂತೋನಿ ಆಶ್ರಮ ಜೆಪ್ಪು ಇವರ ಜಂಟಿ ಆಶ್ರಯದಲ್ಲಿ ‘ಧರ್ಮವು ಸುಮನಸ್ಕರಿಗೆ ಶಾಂತಿ ಸಮಾಧಾನದ ನೆಲೆ’ ಕಾರ್ಯಕ್ರಮವು ಜೆಪ್ಪು ಸಂತ ಆಂತೋನಿ ಆಶ್ರಮದ ಸಂಭ್ರಮ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಡಾ. ಶ್ರೀವರ್ಮ ಹೆಗ್ಗಡೆ ಮಾತನಾಡಿ ಜನರನ್ನು ಮೂಢನಂಬಿಕೆಗೆ ಪ್ರೇರೇಪಿಸುವ ಬದಲು ಧರ್ಮ ಜನರಿಗೆ ಕನ್ನಡಿಯಂತಿರುವಂತಹ ವಾತಾವರಣ ಸೃಷ್ಟಿಸಬೇಕು. ಕನ್ನಡಿಯಲ್ಲಿ ವ್ಯಕ್ತಿ ತನ್ನ ಪ್ರತಿಬಿಂಬವನ್ನು ಕಾಣುತ್ತಾನೆ. ಹೀಗಿರುವಾಗ ಧರ್ಮ ಜನರಿಗೆ ತಮ್ಮ ಜೀವನದಲ್ಲಿ ತಾವೆಲ್ಲಿ ಎಡವಿದ್ದೇವೆ ಎಂಬುದನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಮನಪಾ ಸದಸ್ಯ ಎ.ಸಿ. ವಿನಯ್‌ರಾಜ್, ಕ್ರಿಶ್ಚಿಯಾನಿಟಿ ಪೀಠದ ಮುಖ್ಯಸ್ಥ ಡಾ. ವಿಕ್ಟರ್ ಜಾರ್ಜ್ ಡಿಸೋಜ ಮಾತನಾಡಿದರು. ಆಶ್ರಮದ ನಿರ್ದೇಶಕ ಫಾ. ಒನಿಲ್ ಡಿಸೋಜ , ನಿಯೋಜಿತ ನಿರ್ದೇಶಕ ಾ. ಜೆ.ಬಿ. ಸಿಕ್ವೇರಾ, ಸಹಾಯಕ ನಿರ್ದೇಶಕ ಫಾ. ಲ್ಯಾರಿ ಉಪಸ್ಥಿತರಿದ್ದರು.