×
Ad

ನೆಕ್ಕಿಲಾಡಿ: ‘ಗ್ರೀನ್ ಲ್ಯಾಂಡ್ ರೆಸಿಡೆನ್ಸಿ’ ವಸತಿ ಸಮುಚ್ಚಯದಲ್ಲಿ ಬಾಡಿಗೆಗೆ ಮನೆ ಲಭ್ಯ

Update: 2021-12-23 22:50 IST

ಮಂಗಳೂರು, ಡಿ.23: ಸಂಗಮ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಉಪ್ಪಿನಂಗಡಿ ಬಳಿಯ 34ನೆ ನೆಕ್ಕಿಲಾಡಿಯ ಸಹನಾ ಕಾಂಪೌಂಡ್‌ ನಲ್ಲಿರುವ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ‘ಗ್ರೀನ್ ಲ್ಯಾಂಡ್ ರೆಸಿಡೆನ್ಸಿ’ಯ ವಸತಿ ಸಮುಚ್ಚಯದಲ್ಲಿ ಮನೆಗಳು ಬಾಡಿಗೆಗೆ ಲಭ್ಯವಿದೆ.

ನಗರಕ್ಕೆ ಹತ್ತಿರವಾಗಿದ್ದು ನೈಸರ್ಗಿಕ ಗಾಳಿ ಪ್ರಶಾಂತ ವಾತಾವರಣದಿಂದ ಕೂಡಿದ ಈ ಸಮುಚ್ಚಯವು ವಸತಿಗೆ ಯೋಗ್ಯವಾಗಿದೆ. ಪ್ರಕೃತಿ ಸುಂದರ ತಾಣದಲ್ಲಿರುವ ಈ ಸಮುಚ್ಚಯವು ಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನ ಎಲ್ಲರೂ ಇಷ್ಟಪಡುವಂತಹ ‘ಗ್ರೀನ್ ಲ್ಯಾಂಡ್ ರೆಸಿಡೆನ್ಸಿ’ಯು ಬೆಳೆಯುತ್ತಿರುವ ಉಪ್ಪಿನಂಗಡಿಗೆ ಇದೊಂದು ಅತ್ಯಮೂಲ್ಯ ಕೊಡುಗೆ ಎಂದರೆ ತಪ್ಪಾಗಲಾರದು. ಉತ್ತಮ ವಿನ್ಯಾಸ ಮತ್ತು ಸುಸಜ್ಜಿತ ಹಾಗೂ ಸಕಲ ಸೌಲಭ್ಯಗಳಿಂದ ಕೂಡಿದ ಈ ರೆಸಿಡೆನ್ಸಿಯು ತಲಾ ಎರಡು ಬೆಡ್ ರೂಮ್‌ಗಳ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ.

ನಗರ ಎಂದ ತಕ್ಷಣ ಪರಿಸರ ಮತ್ತು ಕರ್ಕಶ ಶಬ್ದ ಮಾಲಿನ್ಯ ಎಂಬ ಭಾವನೆ ವ್ಯಕ್ತವಾಗುವುದು ಸಹಜ. ಆದರೆ ಗ್ರೀನ್ ಲ್ಯಾಂಡ್ ರೆಸಿಡೆನ್ಸಿಯು ಅದಕ್ಕೆ ಅಪವಾದವಾಗಿದೆ. ಇಲ್ಲಿ ಹಚ್ಚ ಹಸಿರಿನ ಮರ ಗಿಡಗಳಿಂದ ಕೂಡಿದ ಪ್ರಶಾಂತವಾದ ವಾತಾವರಣವಿದೆ.

ವಿಶಾಲವಾದ ಯೋಜನಾ ಬದ್ಧ ಮತ್ತು ವಾಸ್ತು ಪ್ರಕಾರವಾಗಿ ನಿರ್ಮಿಸಿರುವ 3 ಅಂತಸ್ತುಗಳ ಈ ವಸತಿ ಸಮುಚ್ಚಯವು ಎರಡು ಬೆಡ್ ರೂಮ್‌ಗಳನ್ನು ಹೊಂದಿದೆ. ಕೆಳಗಿನ ಅಂತಸ್ತಿನಲ್ಲಿ ಕಾರು ಪಾರ್ಕಿಂಗ್‌ಗೆ ಉತ್ತಮ ವ್ಯವಸ್ಥೆ ಇದೆ. ಶಿಕ್ಷಣ ಸಂಸ್ಥೆಗಳು, ಬಸ್ ನಿಲ್ದಾಣ, ಮಾಲ್‌ಗಳು, ಸೂಪರ್ ಮಾರ್ಕೆಟ್, ಆರೋಗ್ಯ ಕೇಂದ್ರ, ಆಸ್ಪತ್ರೆಗಳು, ಆಟದ ಮೈದಾನ ಸಹಿತ ಸಕಲ ಸೌಕರ್ಯ ಮತ್ತು ಸಂಪರ್ಕ ಸೌಲಭ್ಯವನ್ನು ಇದು ಹೊಂದಿದೆ. ಉತ್ತಮ ಜನವಸತಿ ಪ್ರದೇಶದಲ್ಲಿ ಸುಸಜ್ಜಿತವಾಗಿ ಇದು ನಿರ್ಮಾಣಗೊಂಡಿದೆ.
ದಿನದ 24 ಗಂಟೆಯೂ ನೀರು, ವಿದ್ಯುತ್, ಸೆಕ್ಯುರಿಟಿಗಾರ್ಡ್, ಕಾಮನ್ ಏರಿಯಾಕ್ಕೆ ಗ್ರಾನೈಟ್ ಫ್ಲೋರಿಂಗ್ ಹೀಗೆ ಅನೇಕ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಈ ವಸತಿ ಸಮುಚ್ಚಯ ಹೊಂದಿದೆ.

ಕೆಲವೇ ಫ್ಲ್ಯಾಟ್‌ಗಳು ಬಾಡಿಗೆಗೆ ಲಭ್ಯವಿದೆ. ಒಂದಕ್ಕೊಂದು ಭಿನ್ನವಾದ ಮತ್ತು ಆಕರ್ಷಕ ಹಾಗೂ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಉತ್ಕೃಷ್ಟ ಗುಣಮಟ್ಟದ ಸಮುಚ್ಚಯಗಳನ್ನು ಸಮಂಜಸ ದರಗಳಲ್ಲಿ ನೀಡುವ ಧ್ಯೇಯವನ್ನು ಸಂಸ್ಥೆ ಹೊಂದಿದೆ. ಕೋವಿಡ್ ಸಂದರ್ಭ 2 ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಮಾನವೀಯತೆ ಮೆರೆದ ಕೀರ್ತಿಯೂ ಈ ಸಂಸ್ಥೆಯ ಮಾಲಕರಿಗಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂ: 7899579948, 9844927919ನ್ನು ಸಂಪರ್ಕಿಸಬಹುದು ಸಂಸ್ಥೆಯ ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News