×
Ad

ಇರಾನ್ ಪರಮಾಣು ಒಪ್ಪಂದದ ಮಾತುಕತೆ ಡಿ.27ರಿಂದ ಪುನರಾರಂಭ

Update: 2021-12-23 23:09 IST
photo:PTI

ವಿಯೆನ್ನಾ, ಡಿ.23: 2015ರ ಇರಾನ್ ಪರಮಾಣು ಒಪ್ಪಂದವನ್ನು ಪುನರೂರ್ಜಿತಗೊಳಿಸುವ ನಿಟ್ಟಿನಲ್ಲಿ ಮಾತುಕತೆ ಡಿಸೆಂಬರ್ 27ರಿಂದ ಮತ್ತೆ ಆರಂಭವಾಗಲಿದೆ ಎಂದು ರಶ್ಯಾ ಹೇಳಿದೆ.

ಇಂತಹ ಗಂಭೀರ ವಿಷಯದ ಮಾತುಕತೆಗೆ ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಸಂದರ್ಭ ಸೂಕ್ತವಾದುದಲ್ಲ. ಆದರೆ ಈ ನಿರ್ದಿಷ್ಟ ಪ್ರಕರಣದಲ್ಲಿ ಸಂಬಂಧಪಟ್ಟ ಎಲ್ಲಾ ಪಕ್ಷದವರೂ ಸಮಯ ವ್ಯರ್ಥವಾಗಲು ಇಚ್ಚಿಸುತ್ತಿಲ್ಲ ಮತ್ತು ಜಂಟಿ ಸಮಗ್ರ ಕಾರ್ಯಯೋಜನೆಯನ್ನು ತ್ವರಿತವಾಗಿ ಮರುಸ್ಥಾಪಿಸುವ ಉದ್ದೇಶ ಹೊಂದಿರುವುದಕ್ಕೆ ಇದು ಸಂಕೇತವಾಗಿದೆ ಎಂದು ಈ ಸಭೆಯಲ್ಲಿ ಪಾಲ್ಗೊಳ್ಳಲಿರುವ ರಶ್ಯಾದ ಉನ್ನತ ಪ್ರತಿನಿಧಿ ಮಿಖಾಯಿಲ್ ಉಲ್ಯನೋವ್ ಗುರುವಾರ ಟ್ವೀಟ್ ಮಾಡಿದ್ದಾರೆ.

ಡಿಸೆಂಬರ್ 27ರ ಸಭೆಯಲ್ಲಿ ಚೀನಾ, ಫ್ರಾನ್ಸ್, ಜರ್ಮನಿ, ರಶ್ಯಾ, ಬ್ರಿಟನ್ ಮತ್ತು ಇರಾನ್ ನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಯುರೋಪಿಯನ್ ಯೂನಿಯನ್‌ ನ ವಿದೇಶಿ ಸೇವೆ ವಿಭಾಗ ಹೇಳಿದೆ. ಜಂಟಿ ಸಮಗ್ರ ಕಾರ್ಯಯೋಜನೆಗೆ ಅಮೆರಿಕ ಮರಳುವ ಸಂಭವನೀಯತೆಯ ಬಗ್ಗೆ ಹಾಗೂ ಪೂರ್ಣ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಒಪ್ಪಂದದ ಜಾರಿ ಕುರಿತು ಸಭೆಯಲ್ಲಿ ಚರ್ಚೆ ಮುಂದುವರಿಯಲಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News