ಕೃಷ್ಣಾಪುರ ಇಸ್ಲಾಮಿಕ್ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಮಹಾಸಭೆ

Update: 2021-12-23 17:41 GMT

ಜುಬೈಲ್ : ಕೃಷ್ಣಾಪುರ ಇಸ್ಲಾಮಿಕ್ ಸೋಶಿಯಲ್ ವೆಲ್ಫೇರ್  ಅಸೋಸಿಯೇಷನ್ (KISWA) ಇದರ  ವಾರ್ಷಿಕ  ಕಿಶ್ವ ಮೀಟ್ ಮತ್ತು ಮಹಾಸಭೆಯು ಸೌದಿ ಅರೇಬಿಯಾದ  ಅಲ್ ಜುಬೈಲ್  ನಲ್ಲಿ ಇತ್ತೀಚಿಗೆ ನಡೆಯಿತು.

ಮೊಹಮ್ಮದ್ ಮುಹೀಜ್ ಕಿರಾಅತ್ ಪಠಿಸಿದರು. ಸಭೆಯ ಉದ್ಘಾಟನೆ ಮಾಡಿದ  ಸಂಸ್ಥೆಯ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಎನ್ ಜಿ ಒ ಮಾತನಾಡಿ, ಕೃಷ್ಣಾಪುರ ಪರಿಸರದ ಸಮುದಾಯದ ಬಡವರ  ಕಷ್ಟಗಳಿಗೆ ಸ್ಪಂದಿಸಬೇಕೆಂಬ  ಉದ್ದೇಶವನ್ನಿಟ್ಟುಕೊಂಡು 2020ರಲ್ಲಿ ಸೌದಿ ಅರೇಬಿಯಾದಲ್ಲಿ ಹುಟ್ಟಿಕೊಂಡ ಕಿಶ್ವ ಸಂಘಟನೆಯು ಎಲ್ಲ ಸದಸ್ಯರ ನೆರವಿನೊಂದಿಗೆ ಅತ್ತ್ಯುತ್ತಮವಾದ ಸೇವೆಯನ್ನು ಮಾಡುತ್ತಿದ್ದು,  ಇನ್ನು ಮುಂದಕ್ಕೂ ಬಡವರ ನೆರವಿಗಾಗಿ ಅತ್ತ್ಯತ್ತಮವಾದ ಯೋಜೆನೆಗಳನ್ನು ಹಾಕಿಕೊಂಡಿದ್ದು ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಕರೆ ನೀಡಿದರು.

ಸಂಸ್ಥೆಯ ಉಪಾಧ್ಯಕ್ಷ  ಮುಬೀನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸದಸ್ಯರಾದ ಬಿಎ ಅಬೂಸಾಲಿ ಸ್ವಾಗತಿಸಿದರು. ಬಿಕೆ ಹೈದರ್ ಅವರು ಕಿಶ್ವ ಇದರ 2020-2021  ವಾರ್ಷಿಕ ವರದಿಯನ್ನು ಸಭೆಯಲ್ಲಿ ಓದಿ ಹೇಳಿದರು. ಪ್ರಧಾನ ಕಾರ್ಯದರ್ಶಿ   ಕೆಸಿ ಮೊಹಮ್ಮದ್ ಆಲಿ 2020-2021 ಸಾಲಿನ  ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು. 45 ಸದಸ್ಯರಿರುವ  ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷ : ಇಸ್ಮಾಯಿಲ್ ಎನ್ ಜಿ ಒ, ಉಪಾಧ್ಯಕ್ಷರಾಗಿ ಮುಬೀನ್ ಮತ್ತು ಕೆಎಂ ಕಬೀರ್, ಪ್ರಧಾನ ಕಾರ್ಯದರ್ಶಿಯಾಗಿ ಕೆಸಿ ಮೊಹಮ್ಮದ್ ಅಲಿ, ಕಾರ್ಯದರ್ಶಿಗಳಾಗಿ ಶಕೀಲ್ ವೆಲ್ಕಮ್ , ಶಬೀರ್ ಕೃಷ್ಣಾಪುರ, ನೈನರ್ ಆಸಿಫ್, ಫೈಝಲ್ ಎಫ್ ಎನ್, ಕೋಶಾಧಿಕಾರಿಗಳಾಗಿ ಬಶೀರ್ ವೆಲ್ ಕಮ್, ಇಮ್ತಿಯಾಝ್ ಎನ್ ಜಿ ಸಿ, ಸಲಹೆಗಾರರಾಗಿ ಹೈದರ್ ಬಿಕೆ, ಬಿಎ ಅಬುಸಾಲಿ, ಇಮ್ರಾನ್ ಜಮತ್, ಕೆಎಂ ಹುಸೈನ್, ಸಂಘಟನಾ ಕಾರ್ಯದರ್ಶಿಗಳಾಗಿ ನವಾಝ್, ಕಬೀರ್ ಲಕ್ಕಿಸ್ಟಾರ್, ಕಿಶ್ವ ಘಟಕದ ಸಂಯೋಜಕರಾಗಿ ರಿಯಾದ್  ಘಟಕ : ಉಮರ್, ಮುಹಮ್ಮದ್ ಅಲಿ ವೆಲ್ ಕಮ್, ಯಾಂಬು  ಘಟಕ : ಸಫ್ರಾಝ್ , ಇಕ್ಬಾಲ್, ಜಿಝಾನ್ ಘಟಕ : ಅವುಫಾಝ್ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News