ಕ್ರಿಸ್‌ಮಸ್ ಸಂಭ್ರಮದ ಹಬ್ಬ: ವಿಶ್ರಾಂತ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ
ಮಂಗಳೂರು, ಡಿ.24: ಕ್ರಿಸ್‌ಮಸ್ ಆಚರಣೆಗೆ ಜಾತಿ, ಧರ್ಮದ ಬೇಧವಿಲ್ಲ. ಸರ್ವರಿಗೂ ಇದು ಸಂಭ್ರಮದ ಹಬ್ಬ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರ ನೇತೃತ್ವದಲ್ಲಿ ಬಲ್ಮಠ ಶಾಂತಿ ನಿಲಯ ಬಿಷಪ್ ಜತ್ತನ್ನ ಮೆಮೋರಿಯಲ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಸರ್ವಧರ್ಮ ಸೌಹಾರ್ದ ಕ್ರಿಸ್‌ಮಸ್ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಐವನ್ ಡಿಸೋಜ ಅವರ ನೇತೃತ್ವದಲ್ಲಿ ಸೌಹಾರ್ದ ಕ್ರಿಸ್‌ಮಸ್ ಕೂಟ ಆಯೋಜನೆ ಆಗಿರುವುದು ಸೌಹಾರ್ದತೆಗೆ ಕೊಡುಗೆಯಾಗಿದೆ ಎಂದು ಅವರು ಹೇಳಿ ಶುಭ ಹಾರೈಸಿದರು.
ಚಿತ್ರ ನಟ ಅರವಿಂದ ಬೋಳಾರ್ ಭಾಗವಹಿಸಿ ಶುಭ ಹಾರೈಸಿದರು. ಮಂಗಳೂರು ಆಕಾಶವಾಣಿ ನಿವೃತ್ತ ಅಧಿಕಾರಿ ಡಾ.ಮುದ್ದು ಮೂಡುಬೆಳ್ಳೆ, ಕೆಟಿಸಿ ಪ್ರಾಂಶುಪಾಲ ಎಚ್.ಎಂ.ವಾಟ್ಸನ್, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಪ್ರಮುಖರಾದ ಜಯರಾಮ ಶೇಖ, ವಿವೇಕ್‌ರಾಜ್ ಪೂಜಾರಿ, ಡಾ.ಕವಿತಾ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಸ್ವಾಗತಿಸಿದರು. ಚಿತ್ತರಂಜನ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಐವನ್ ಡಿಸೋಜ ಅಭಿಮಾನಿ ಬಳಗದ ಪ್ರಮುಖರಾದ ನಾಗೇಂದ್ರ ಕುಮಾರ್ ವಂದಿಸಿದರು. ಮೆಲ್ವಿನ್ ವಾಸ್ ಕಾರ್ಯಕ್ರಮ ನಿರೂಪಿಸಿದರು.