×
Ad

ಲುಧಿಯಾನ ಕೋರ್ಟ್‌ ಸ್ಫೋಟದಲ್ಲಿ ಸಾವನ್ನಪ್ಪಿದ ಬಾಂಬರ್ ಮಾಜಿ ಪೊಲೀಸ್ ಸಿಬ್ಬಂದಿ: ವರದಿ

Update: 2021-12-24 22:24 IST
photo:PTI

ಚಂಡೀಗಢ: ಪಂಜಾಬ್‌ನ ಲುಧಿಯಾನದ ನ್ಯಾಯಾಲಯದಲ್ಲಿ ಗುರುವಾರ ನಡೆದ ಸ್ಫೋಟದಲ್ಲಿ ಸಾವನ್ನಪ್ಪಿದ ವ್ಯಕ್ತಿಯೊಬ್ಬನ ಶವವನ್ನು ಗುರುತಿಸಲಾಗಿದ್ದು, ಆ ಮೃತದೇಹ ಆತ್ಮಾಹುತಿ ಬಾಂಬರ್‌ನದ್ದು  ಎಂದು ನಂಬಲಾಗಿದೆ. ಆತ್ಮಾಹುತಿ ಬಾಂಬರ್  ಮಾಜಿ ಪೊಲೀಸ್ ಸಿಬ್ಬಂದಿಯಾಗಿದ್ದಾನೆ ಎಂದು ಶುಕ್ರವಾರ ಮೂಲಗಳು  ಎನ್‌ಡಿಟಿವಿಗೆ ತಿಳಿಸಿವೆ.

ಮೂಲಗಳ ಪ್ರಕಾರ,ಆತ್ಮಾಹುತಿ  ಬಾಂಬರ್‌ನ ದೇಹವನ್ನು ಮಾಜಿ ಪೊಲೀಸ್ ಸಿಬ್ಬಂದಿ ಗಗನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಹೆಡ್ ಕಾನ್‌ಸ್ಟೇಬಲ್ ಆಗಿದ್ದ ಸಿಂಗ್ ನನ್ನು 2019 ರಲ್ಲಿ ಸೇವೆಯಿಂದ ವಜಾಗೊಳಿಸಲಾಯಿತು ಮತ್ತು ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಎರಡು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದ. ಸಿಂಗ್ ನನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು.

  ಸಿಮ್ ಕಾರ್ಡ್ ಮತ್ತು ವೈರ್‌ಲೆಸ್ ಡಾಂಗಲ್ ಸಿಂಗ್ ನನ್ನು ಗುರುತಿಸಲು ಸಹಾಯ ಮಾಡಿತು ಮತ್ತು ಮೃತದೇಹ ಸಿಂಗ್ ಅವರದೇ ಎಂದು ಕುಟುಂಬದವರು ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟದಲ್ಲಿ ಪಾಕಿಸ್ತಾನಿ ಏಜೆನ್ಸಿಗಳು ಅಥವಾ ಖಲಿಸ್ತಾನಿ ಗುಂಪುಗಳು ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಮತ್ತು ಮಾಜಿ ಸಚಿವ ಬಿಕ್ರಮ್ ಮಜಿಥಿಯಾ ಹೆಸರಿಸಲಾದ ಡ್ರಗ್ಸ್ ಪ್ರಕರಣಕ್ಕೆ ಇದಕ್ಕೂ ಸಂಬಂಧವಿದೆ ಎಂದು ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News