ಬ್ರಹ್ಮಾವರ: ತಾಯಿ - ಮಗ ನಾಪತ್ತೆ
Update: 2021-12-24 22:49 IST
ಬ್ರಹ್ಮಾವರ, ಡಿ.24: ತಾಯಿ ಮಗ ನಾಪತ್ತೆಯಾಗಿರುವ ಘಟನೆ ಹಾರಾಡಿ ಗ್ರಾಮದ ಸಾಲಿಕೇರಿ ವೆಂಕಪ್ಪಅಮೀನ್ ಕಂಪೌಂಡ್ ಎಂಬಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸಾಲಿಕೇರಿಯ ಮಾರುತಿ ಆರ್. ಎಂಬವರ ಪತ್ನಿ ಆಶಾ ಆರ್.(30) ಮತ್ತು ಮಗ ಮನೀಶಾ(6) ನಾಪತ್ತೆಯಾದವರು. ಮಾರುತಿ ನ.9ರಂದು ತರಕಾರಿ ವ್ಯಾಪಾರದ ನಿಮಿತ್ತ ಮನೆಯಿಂದ ಹೋಗಿ ವಾಪಾಸ್ಸು ಸಂಜೆ ಮನೆಗೆ ಬಂದಾಗ ಪತ್ನಿ ಮತ್ತು ಮಗ ನಾಪತ್ತೆಯಾಗಿರುವುದು ಕಂಡುಬಂದಿದೆ. ಎಲ್ಲೂ ಹುಡುಕಾಡಿದರೂ ಇವರಿಬ್ಬರು ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.