ಉತ್ತರಾಖಂಡ: ಬಿಜೆಪಿ ಸರಕಾರದಲ್ಲಿ ಭಿನ್ನಮತ,ಸಂಪುಟ ಸಚಿವ ಹರಕ್ ಸಿಂಗ್ ರಾವತ್ ರಾಜೀನಾಮೆ

Update: 2021-12-24 18:10 GMT
Photo: ANI

ಡೆಹ್ರಾಡೂನ್ : ಬಿಜೆಪಿ ನೇತೃತ್ವದ ಉತ್ತರಾಖಂಡ ಸರಕಾರದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಸಂಪುಟ ಸಚಿವ ಹರಕ್ ಸಿಂಗ್ ರಾವತ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ರಾವತ್ ತನ್ನ ಸರಕಾರದ ವಿರುದ್ಧವೇ ಗಂಭೀರ ಆರೋಪವನ್ನು ಮಾಡಿದ್ದಾರೆ ಎಂದು ವರದಿಯಾಗಿದೆ.

ಸಂಪುಟ ಸಭೆಯಿಂದ ಹೊರ ಬಂದ ಬಳಿಕ ಸಿಂಗ್ ರಾಜೀನಾಮೆ ನೀಡಿದ್ದಾರೆ.

ಹರಕ್ ಸಿಂಗ್ ರಾವತ್ ತುಂಬಾ ಸಮಯದಿಂದ ಕೋಟ್ ದ್ವಾರದಲ್ಲಿ ಮೆಡಿಕಲ್ ಕಾಲೇಜು ಮಂಜೂರಾತಿಗಾಗಿ ಮನವಿ ಮಾಡುತ್ತಿದ್ದರು.  ಹಲವು ಬಾರಿ ಸರಕಾರದ ಮುಂದೆ ಈ ವಿಚಾರ ಎತ್ತಿದ್ದರು. ಆದರೆ ಅವರ ಬೇಡಿಕೆಯನ್ನು ಈಡೇರಿಸಲಾಗಿಲ್ಲ. ಹೀಗಾಗಿ ಅವರು ರಾಜೀನಾಮೆಯ ನಿರ್ದಾರ ತೆಗೆದುಕೊಂಡಿದ್ದಾರೆ.

"ನನ್ನ ಕ್ಷೇತ್ರಕ್ಕೆ 5 ವರ್ಷದಿಂದ ಮೆಡಿಕಲ್ ಕಾಲೇಜು ನೀಡುವಂತೆ ಕೇಳುತ್ತಿದ್ದೇನೆ. ಆದರೆ ಈ ಜನರು ನನ್ನನ್ನು ಭಿಕಾರಿಯಂತೆ ನಡೆಸಿಕೊಂಡರು. ನಮ್ಮ ಸರಕಾರವೇ ನನ್ನ ಬೇಡಿಕೆಯನ್ನು ಈಡೇರಿಸಿಲ್ಲ'' ಎಂದು 'ಆಜ್ ತಕ್ 'ನೊಂದಿಗೆ ಮಾತನಾಡುತ್ತಾ ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News