ಸುಡಾನ್: ಸೇನಾಡಳಿತ ವಿರೋಧಿಸಿ ಮುಂದುವರಿದ ಪ್ರತಿಭಟನೆ

Update: 2021-12-25 18:05 GMT
ಸಾಂದರ್ಭಿಕ ಚಿತ್ರ:PTI

ಖಾರ್ಟೌಮ್, ಡಿ.25: ಸುಡಾನ್‌ನಲ್ಲಿ ಅಕ್ಟೋಬರ್‌ನಲ್ಲಿ ಸೇನೆಯು ನಡೆಸಿದ ಕ್ಷಿಪ್ರಕ್ರಾಂತಿಯನ್ನು ವಿರೋಧಿಸಿ ಸಾವಿರಾರು ಪ್ರತಿಭಟನಾಕಾರರು ಶನಿವಾರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದಾಗ ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿ ಅವರನ್ನು ಚದುರಿಸಿದರು ಎಂದು ವರದಿಯಾಗಿದೆ. ಈ ಪ್ರತಿಭಟನೆ ಕಳೆದ 10 ದಿನಗಳಿಂದಲೂ ಮುಂದುವರಿಯುತ್ತಿದೆ. ಚುನಾವಣೆ ನಡೆಸಬೇಕು ಮತ್ತು ಆಡಳಿತದಲ್ಲಿ ಸೇನೆ ಹಸ್ತಕ್ಷೇಪ ನಡೆಸಬಾರದು ಎಂಬುದು ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ. ರಾಜಧಾನಿ ಮಾತ್ರವಲ್ಲದೆ, ಆಮ್ಡರ್ಮನ್, ಬಾಹ್ರಿ, ವಾಡ್ ಮಡಾನಿ, ಅಟ್ಬಾರ ಮುಂತಾದ ನಗರಗಳಲ್ಲೂ ಪ್ರತಿಭಟನೆ, ರ್ಯಾಲಿ ನಡೆದಿದೆ. ಎಲ್ಲೆಡೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News