×
Ad

ಭಾರತದಲ್ಲಿ ಒಮೈಕ್ರಾನ್ ಪ್ರಕರಣ 422ಕ್ಕೇರಿಕೆ, ಮಹಾರಾಷ್ಟ್ರದಲ್ಲಿ ಅಧಿಕ

Update: 2021-12-26 11:12 IST

ಹೊಸದಿಲ್ಲಿ:  ವೇಗವಾಗಿ ಹರಡುವ ಒಮೈಕ್ರಾನ್ ರೂಪಾಂತರದ ಪ್ರಕರಣಗಳ ಸಂಖ್ಯೆ ಭಾರತದಲ್ಲಿ 422 ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಸೋಂಕುಗಳು ವರದಿಯಾಗಿವೆ.

ಭಾರತವು ಫ್ರಂಟ್ ಲೈನ್ ವರ್ಕರ್ಸ್ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜನವರಿ 10 ರಿಂದ 'ಮುನ್ನೆಚ್ಚರಿಕೆ ಡೋಸ್ ಗಳನ್ನು' ಘೋಷಿಸಿದೆ.

ಮಹಾರಾಷ್ಟ್ರ ರಾಜ್ಯ ಅತಿ ಹೆಚ್ಚು ಕೊರೋನವೈರಸ್ ಪ್ರಕರಣಗಳನ್ನು ವರದಿ ಮಾಡಿದೆ. ಈ ರಾಜ್ಯದಲ್ಲಿ ಹೊಸ ರೂಪಾಂತರದ 108 ಪ್ರಕರಣಗಳಿವೆ. ಆರೋಗ್ಯ ಸಚಿವಾಲಯದ ಪ್ರಕಾರ ರಾಜ್ಯದಲ್ಲಿ ಇದುವರೆಗೆ ನಲವತ್ತೆರಡು ಜನರು ಚೇತರಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ರಾಜ್ಯದ ಬಳಿಕ ದಿಲ್ಲಿ 2ನೇ ಸ್ಥಾನದಲ್ಲಿದೆ. ದಿಲ್ಲಿಯಲ್ಲಿ 79 ಪ್ರಕರಣಗಳಿವೆ (ಅದರಲ್ಲಿ 23 ಚೇತರಿಸಿಕೊಂಡಿದ್ದಾರೆ). ಗುಜರಾತ್‌ನಲ್ಲಿ 43 ಪ್ರಕರಣಗಳಿದ್ದು, ಇದುವರೆಗೆ 10 ಜನರು ಚೇತರಿಸಿಕೊಂಡಿದ್ದಾರೆ.

ದಕ್ಷಿಣ ರಾಜ್ಯದಲ್ಲಿ  ತೆಲಂಗಾಣವು ಹೊಸ ರೂಪಾಂತರದ 41 ಪ್ರಕರಣಗಳನ್ನು ( 10 ಚೇತರಿಸಿಕೊಂಡ ರೋಗಿಗಳು) ವರದಿ ಮಾಡಿದೆ.  ಆದರೆ, ಕೇರಳ ಮತ್ತು ನೆರೆಯ ತಮಿಳುನಾಡಿನಲ್ಲಿ ಕ್ರಮವಾಗಿ 38 (ಒಬ್ಬ ರೋಗಿ ಚೇತರಿಸಿಕೊಂಡಿದ್ದಾರೆ) ಹಾಗೂ  34 ಪ್ರಕರಣಗಳು ಇವೆ. ಇಂದು ಬೆಳಿಗ್ಗೆ ಬಿಡುಗಡೆಯಾದ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ  ಕರ್ನಾಟಕದಲ್ಲಿ 31 ಪ್ರಕರಣಗಳಿವೆ. ಈ  ರಾಜ್ಯದಲ್ಲಿ ಇದುವರೆಗೆ 15 ಜನರು ಹೊಸ ಪ್ರಬೇಧದ ಕೊರೋನದಿಂದ ಚೇತರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News