×
Ad

ಅಸ್ಸಾಂ: ಚರ್ಚ್‌ನಲ್ಲಿ ಕ್ರಿಸ್‌ಮಸ್ ಆಚರಣೆಗೆ ಅಡ್ಡಿಪಡಿಸಿದ ಬಜರಂಗ ದಳ

Update: 2021-12-26 12:48 IST
ಸಾಂದರ್ಭಿಕ ಚಿತ್ರ

ಗುವಾಹಟಿ: ತಾವು  ಬಜರಂಗದಳದ ಸದಸ್ಯರು ಎಂದು ಹೇಳಿಕೊಂಡ ಗುಂಪೊಂದು ಚರ್ಚ್‌ನೊಳಗೆ ಬಲವಂತವಾಗಿ ನುಗ್ಗಿ ಕ್ರಿಸ್ ಮಸ್ ಆಚರಣೆಗೆ ಅಡ್ಡಿಪಡಿಸಿರುವ ಘಟನೆ ಬಿಜೆಪಿ ಆಡಳಿತವಿರುವ ಅಸ್ಸಾಂ ರಾಜ್ಯದ ಸಿಲ್ಚಾರ್‌ನಲ್ಲಿ ಶನಿವಾರ ನಡೆದಿದೆ ಎಂದು NDTV ವರದಿ ಮಾಡಿದೆ.

ಕ್ರಿಶ್ಚಿಯನ್ನರು ಕ್ರಿಸ್‌ಮಸ್ ಆಚರಿಸುವುದರಿಂದ  ನಮಗೆ ಯಾವುದೇ ಸಮಸ್ಯೆ ಇಲ್ಲ.  ಡಿಸೆಂಬರ್ 25 'ತುಳಸಿ ದಿವಸ್' ಕೂಡ ಆಗಿದ್ದು, ಆ ದಿನ  ಹಿಂದೂಗಳು ಕ್ರಿಸ್ ಮಸ್ ಆಚರಿಸುವುದಕ್ಕೆ ನಾವು  ಅವಕಾಶ ನೀಡುವುದಿಲ್ಲ ಎಂದು ಸಂಘಪರಿವಾರದ ಸದಸ್ಯರು ಘೋಷಿಸಿದರು.

ಇಲ್ಲಿಯವರೆಗೆ ಯಾವುದೇ ದೂರು ದಾಖಲಾಗಿಲ್ಲ. ಹೀಗಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಇದೊಂದು ಸಣ್ಣ ಗಲಾಟೆಯಾಗಿದ್ದು ಸ್ವಯಂಪ್ರೇರಿತ ಪ್ರಕರಣದ ಅಗತ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ

"ನಾವು ಕ್ರಿಸ್‌ಮಸ್‌ ವಿರೋಧಿಗಳಲ್ಲ... ಕ್ರಿಶ್ಚಿಯನ್ನರೇ ಕ್ರಿಸ್‌ಮಸ್ ಆಚರಿಸಲಿ. ಕ್ರಿಸ್‌ಮಸ್ ಸಮಾರಂಭದಲ್ಲಿ ಹಿಂದೂ ಹುಡುಗ-ಹುಡುಗಿಯರು ಭಾಗವಹಿಸುವುದನ್ನು ನಾವು ವಿರೋಧಿಸುತ್ತೇವೆ. ಇಂದು ಹಿಂದೂಗಳ ತುಳಸಾ ದಿವಸ್.  ಆದರೆ ಅದನ್ನು ಯಾರೂ ಆಚರಿಸಲಿಲ್ಲ. ಇದು ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತದೆ... ಎಲ್ಲರೂ ಕ್ರಿಸ್ ಮಸ್ ಶುಭಾಶಯಗಳು ಎಂದು ಹೇಳುತ್ತಿದ್ದಾರೆ. ಹೀಗಾದರೆ  ನಮ್ಮ ಧರ್ಮ ಹೇಗೆ ಉಳಿಯುತ್ತದೆ?" ಎಂದು ದಾಳಿಕೋರರಲ್ಲಿ ಒಬ್ಬ (ಕೇಸರಿ ಕ್ಯಾಪ್ ಧರಿಸಿದ್ದ) ಆನ್‌ಲೈನ್‌ನಲ್ಲಿ ಪ್ರಸಾರವಾದ ವೀಡಿಯೊದಲ್ಲಿ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News