ಎಣ್ಣೆಹೊಳೆ: ಸಚಿವ ಸುನೀಲ್ ಕುಮಾರ್ ಏತ ನೀರಾವರಿ ಕಾಮಗಾರಿ ವೀಕ್ಷಣೆ
Update: 2021-12-26 19:16 IST
ಕಾರ್ಕಳ : ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಜ.5 ರೊಳಗೆ ಏತ ನೀರಾವರಿ ಯೋಜನೆಯ ಅಣೆಕಟ್ಟುವಿನ ಗೇಟ್ ಅಳವಡಿಸಿ ನೀರು ಸಂಗ್ರಹ ಮಾಡುವಂತೆ ಸೂಚಿಸಿದರು. ಜನವರಿ ಅಂತ್ಯದೊಳಗೆ ಪ್ರಾಯೋಗಿಕ ನೀರು ಪೂರೈಕೆ ಮಾಡುವಂತೆ ಹಾಗು ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸ್ಥಳೀಯರಿಗೆ ನೀಡುವ ಸಲುವಾಗಿ ಜನವರಿ ಮೊದಲ ವಾರದಲ್ಲಿ ಸಭೆ ಕರೆಯುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮರ್ಣೆ ಗ್ರಾಮ.ಪಂ ಅಧ್ಯಕ್ಷೆ ಜ್ಯೋತಿ ಪೂಜಾರಿ , ಎ.ಪಿ.ಎಂ.ಸಿ ಅಧ್ಯಕ್ಷ ರತ್ನಾಕರ್ ಅಮೀನ್ , ಸ್ಥಳಿಯರಾದ ನಂದ ಕುಮಾರ್ ಹೆಗ್ಡೆ , ಅರುಣ್ ಭಟ್ ಹೆಗ್ಡೆ, ಗೌತಂ ನಾಯಕ್, ನವೀನ್ ನಾಯಕ್ ಉಪಸ್ಥಿತರಿದ್ದರು.