ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್‌ನಿಂದ ಸಾಮೂಹಿಕ ವಿವಾಹ
ಮಂಗಳೂರು, ಡಿ.26: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್)ದ ಕೆ.ಸಿ.ರೋಡು ಸೆಂಟರ್‌ನ ಹತ್ತನೇ ವರ್ಷದ ಪ್ರಯುಕ್ತ ಎಸ್.ಉಚ್ಚಿಲದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವು ರವಿವಾರ ನಡೆಯಿತು.
ನಿಖಾಹ್‌ಗೆ ನೇತೃತ್ವ ನೀಡಿ ಮಾತನಾಡಿದ ಕರ್ನಾಟಕ ಸುನ್ನಿ ಜಂಇಯತುಲ್ ಉಲಮಾ ಅಧ್ಯಕ್ಷ, ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಹೆಣ್ಣು ಹೆತ್ತವರ ಕಣ್ಣೀರು ಒರೆಸುವ ನೆಲೆಯಲ್ಲಿ ಸಂಘಟನೆಯು ಸಾಮೂಹಿಕ ವಿವಾಹ ಕಾರ್ಯಕ್ರಮದ ಮೂಲಕ ಹೊಸ ಜೀವನ ಕಲ್ಪಿಸಿದೆ. ಇದೊಂದು ಅತ್ಯಂತ ಪುಣ್ಯದಾಯಕ ಸೇವೆಯಾಗಿದೆ ಎಂದು ಹೇಳಿದರು.
ಕರ್ನಾಟಕ ಸುನ್ನಿ ಜಂಇಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಬದುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್-ಬುಖಾರಿ ಕಡಲುಂಡಿ, ಕರ್ನಾಟಕ ಸುನ್ನಿ ಜಂಇಯ ತುಲ್ ಉಲಮಾ ಅಧ್ಯಕ್ಷ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, 407 ಜುಮಾ ಮಸೀದಿಯ ಮುದರ್ರಿಸ್ ಇಬ್ರಾಹಿಂ ಫೈಝಿ ಉಚ್ಚಿಲ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಪಶ್ಚಿಮ ವಲಯಾಧ್ಯಕ್ಷ ಮುಹಮ್ಮದಾಲಿ ಸಖಾಫಿ, ಕೆ.ಸಿ.ರೋಡ್ ಅಲ್‌ಮುಬಾರಕ್ ಜುಮಾ ಮಸೀದಿಯ ಅಧ್ಯಕ್ಷ ಮುನೀರ್ ಸಖಾಫಿ ಅಲ್ ಫುರ್ಖಾನಿ, ಶಾಸಕ ಯು.ಟಿ.ಖಾದರ್, ಎಸ್‌ಜೆಎಂ ತಲಪಾಡಿ ರೇಂಜ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್, ಎಸ್‌ವೈಎಸ್ ಕೆ.ಸಿ. ರೋಡು ಘಟಕಾಧ್ಯಕ್ಷ ಎ.ಎಂ.ಅಬ್ಬಾಸ್, ಮ್ಯಾರೇಜ್ ಸೆಲ್ ಅಧ್ಯಕ್ಷ ಯು.ಬಿ.ಮುಹಮ್ಮದ್, ಎಸ್‌ಎಂಎ ತಲಪಾಡಿ ರೇಂಜ್ ಅಧ್ಯಕ್ಷ ಕೆ.ಎಂ. ಅಬ್ಬಾಸ್ ಕೊಳಂಗೆರೆ, ಕೆ.ಎಂ.ಸಿದ್ದೀಕ್ ಮೋಂಟುಗೋಳಿ, ಬಶೀರ್ ಸಅದಿ ಬೆಂಗಳೂರು, ಎಸೆಸ್ಸೆಫ್ ಕೋಟೆಕಾರ್ ಘಟಕಾಧ್ಯಕ್ಷ ಅಧ್ಯಕ್ಷ ಅನ್ಸಾರ್ ಸಅದಿ, ತಲಪಾಡಿ ಘಟಕಾಧ್ಯಕ್ಷ ಕೆ.ಎಚ್.ಇಬ್ರಾಹಿಂ ಉಪಸ್ಥಿತರಿದ್ದರು.
ಮ್ಯಾರೇಜ್ ಸೆಲ್ ಸಂಚಾಲಕ ಎನ್.ಎಸ್.ಉಮರ್ ಮಾಸ್ಟರ್ ಸ್ವಾಗತಿಸಿದರು. ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆ ಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ತಲಪಾಡಿ ವಂದಿಸಿದರು.