×
Ad

ಕೋಟೆಕಾರ್ ಪಟ್ಟಣ ಪಂಚಾಯತ್ ಚುನಾವಣೆಗೆ ಸಿದ್ಧತೆ

Update: 2021-12-26 19:51 IST

ಉಳ್ಳಾಲ :ಸೋಮವಾರ ನಡೆಯಲಿರುವ ಕೋಟೆಕಾರ್ ಪಟ್ಟಣ ಪಂಚಾಯತ್ ಚುನಾವಣೆಗೆ ಪೂರ್ಣ ಸಿದ್ಧತೆ ಈಗಾಗಲೇ ನಡೆದಿದೆ. ಮತದಾರರು ಕೋಟೆಕಾರ್ ಪಟ್ಟಣ ಪಂಚಾಯತ್ ಅಧಿಕಾರದ ಚುಕ್ಕಾಣಿ ಹಿಡಿಯಲು ಅರ್ಹರು ಯಾರು  ಎಂದು ತೀರ್ಪು ನೀಡಲಿದ್ದಾರೆ.

17 ವಾರ್ಡ್ ಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ 17, ಬಿಜೆಪಿ 17, ಸಿಪಿಐಎಂ 2 ಎಸ್ ಡಿಪಿಐ 6 ಹಾಗೂ ಮೂವರು ಪಕ್ಷೇತರರು ಸೇರಿದಂತೆ ಒಟ್ಟು 45 ಮಂದಿ ಕಣದಲ್ಲಿದ್ದಾರೆ. ಮತಯಾಚನೆ, ಬಹಿರಂಗ ಪ್ರಚಾರ ಮುಕ್ತಾಯಗೊಂಡಿದ್ದು, ಅಭ್ಯರ್ಥಿ ಗಳು ಚುನಾವಣೆ ಎದುರಿಸಲು ಸಜ್ಜಾಗಿ ನಿಂತಿದ್ದಾರೆ. ಈ 45 ಅಭ್ಯರ್ಥಿ ಗಳ ಪೈಕಿ ಜಯಭೇರಿ ಬಾರಿಸಿರುವ 17 ಅಭ್ಯರ್ಥಿ ಗಳು ಯಾರು ಎಂಬುದನ್ನು ಮತದಾರರು ನಿರ್ಧರಿಸಲಿದ್ದಾರೆ.

ಕೋಟೆಕಾರ್ ಪಟ್ಟಣ ಪಂಚಾಯಿತಿಯ 17 ವಾರ್ಡ್ ಗಳ ಚುನಾವಣೆಗೆ 18 ಮತಗಟ್ಟೆ ಗಳನ್ನು ತನ್ನ ತೆರೆಯಲಾಗಿದೆ.  ಮಾಡೂರು ನಲ್ಲಿ ಮೂರು, ಅಜ್ಜಿನಡ್ಕದಲ್ಲಿ ಎರಡು, ಕಣಚೂರು ಶಾಲೆಯಲ್ಲಿ ಒಂದು, ಬಗಂಬಿಲದಲ್ಲಿ ಎರಡು,ಮರ್ಕಜದಲ್ಲಿ ಎರಡು, ಉಚ್ಚಿಲ ದಲ್ಲಿ ಒಂದು,ಮಡ್ಯಾರ್ ನಲ್ಲಿ ಎರಡು, ಪನೀರ್ ನಲ್ಲಿ ಎರಡು, ಕೋಟೆಕಾರ್ ಪಟ್ಟಣ ಪಂಚಾಯಿತಿಯಲ್ಲಿ ಎರಡು ಮತಗಟ್ಟೆ ಗಳನ್ನು ತೆರೆಯಲಾಗಿದೆ.

9,10 ಹಾಗೂ 3ನೇ ವಾರ್ಡ್ ಗಳ ಮತಗಟ್ಟೆ ಹೊಂದಿರುವ ಮಾಡೂರು, ಅಜ್ಜಿನಡ್ಕ, ಕೊಮರಂಗಲ ಅತೀ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದ್ದು, ಇಲ್ಲಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಮತಗಟ್ಟೆಗಳ ಬಳಿ ತೆರೆಯುವ ಪಕ್ಷಗಳ ಬೂತ್ ಗಳಲ್ಲಿ ಇಬ್ಬರಿಗೆ ಮಾತ್ರ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ವಿವಿಧ ಪಕ್ಷಗಳ ಕಾರ್ಯಕರ್ತರು ಮತಗಟ್ಟೆಗಳ ಬಳಿ ಸೇರಿದಂತೆ ಸೂಚನೆ ನೀಡಲಾಗಿದೆ.

ಚುನಾವಣಾ ಅಧಿಕಾರಿಗಳಾಗಿ ಸತೀಶ್ ಹಾಗೂ ಸದಾನಂದ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಸಿಡಿಪಿಒ ಸದಸ್ಯ ಶೈಲ ರಿಟೈನರ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಉಳ್ಳಾಲ ನಗರ ಸಭಾ ಪೌರಾಯುಕ್ತ ರಾಯಪ್ಪ ಮಾದರಿ ನೀತಿ ಸಂಹಿತೆ ಅಧಿಕಾರಿಯಾಗಿ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಭಾಕರ್ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅಧಿಕಾರಿಗಳು ರವಿವಾರ ಎಲ್ಲಾ ಮತಗಟ್ಟೆಗಳ ಬಳಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಡಿ.30 ತಾಲೂಕು ಪಂಚಾಯತ್ ಕಚೇರಿಯಲ್ಲಿ ಮಾತು ಎಣಿಕೆ ಕಾರ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News