ಅಲ್ ಮದೀನದಲ್ಲಿ ಎ. ಪಿ. ಉಸ್ತಾದರಿಗೆ ಭವ್ಯ ಸ್ವಾಗತ
ನರಿಂಗಾನ: ಇಂಡಿಯನ್ ಗ್ರಾಂಡ್ ಮುಫ್ತಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಅಧ್ಯಕ್ಷರೂ ಆಗಿರುವ ಶೈಖುನಾ ಎ. ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಅಲ್ ಮದೀನ ಕ್ಕೆ ಇಂದು ಭೇಟಿ ನೀಡಿದಾಗ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಶರಫುಲ್ ಉಲಮಾ(ನ.ಮ) ರವರ ಮಕ್ಬರ ಝಿಯಾರತ್ ನಡೆಸಿ ದ ಉಸ್ತಾದರು ನಂತರ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದರು. ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಅವರು ಸದಸ್ಯರೆಲ್ಲರ ಪ್ರಾಮಾಣಿಕ ಸೇವೆಯಿಂದ ಮಾತ್ರ ಸಂಸ್ಥೆಯ ಅಭಿವೃದ್ಧಿ ಸಾಧ್ಯ, ಪ್ರತಿಯೊಬ್ಬರೂ ಬದ್ಧತೆಯಿಂದ ಸೇವಾನಿರತರಾಗಬೇಕೆಂದು ಕರೆಯಿತ್ತರು.
ಸಂಸ್ಥೆಯ ಜನರಲ್ ಮ್ಯಾನೇಜರ್ ಕೆ ಪಿ. ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಸ್ಮಾಈಲ್ ಅಲ್ ಹಾದಿ ತಂಙಳ್, ಮಹಮೂದ್ ಫೈಝಿ ವಾಲೆಮುಂಡೇವು, ಕೋಶಾಧಿಕಾರಿ ಮಜೀದ್ ಹಾಜಿ ಮುಂಬೈ, ಏಶಿಯನ್ ಬಾವ ಹಾಜಿ, ಹಾಜಿ ಎನ್.ಎಸ್. ಕರೀಂ, ಶೌಕತ್ ಹಾಜಿ, ಹಾಜಿ ಫಾರೂಖ್ ಅಬ್ಬಾಸ್ ಉಳ್ಳಾಲ, ಮುಹಮ್ಮದ್ ಕುಂಞಿ ಅಮ್ಜದಿ, ಮುನೀರ್ ಕಾಮಿಲ್ ಸಖಾಫಿ, ಮನ್ಸೂರ್ ಹಿಮಮಿ, ಅಬ್ದುಲ್ ರಝಾಕ್ ಮಾಸ್ಟರ್ ನಾವೂರು, ಪಡಿಕ್ಕಲ್ ಮದನಿ, ಅಬ್ದುಲ್ ಖಾದರ್ ಝುಹ್ರಿ, ಸಿದ್ದೀಖ್ ಅಹ್ಸನಿ, ಹಾಜಿ ಮೊಯ್ದಿನ್ ಮಲಾಝ್, ಪುತ್ತು ಮೋರ್ಲ ಮುಂತಾದವರು ಉಪಸ್ಥಿತರಿದ್ದರು.
ಬಳಿಕ ನಡೆದ ಪ್ರತ್ಯೇಕ ವಿವಾಹ ಸಮಾರಂಭದಲ್ಲಿ ಅಲ್ ಮದೀನ ಅಲುಮ್ನಿ ಎಸೋಸಿಯೇಶನ್ ಉಪಾಧ್ಯಕ್ಷ ಇಕ್ಬಾಲ್ ಮರ್ಝೂಖಿ ಸಖಾಫಿ ರವರ ನಿಖಾಹನ್ನು ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ನೆರವೇರಿಸಿದರು. ಅಲ್ ಮದೀನ ದಅವಾ ಕಾಲೇಜಿನ ತರಗತಿಗಳಲ್ಲಿ ವಿವಿಧ ವಿಷಯಗಳಲ್ಲಿ ಉನ್ನತ ಅಂಕ ಗಳಿಸಿದ ತಯ್ಯಿಬ್, ಬಾಸಿತ್, ದಾವೂದ್ ಮುಂತಾದ ವಿದ್ಯಾರ್ಥಿಗಳಿಗೆ ಉಸ್ತಾದರು ಬಹುಮಾನ ವಿತರಿಸಿದರು.