ಹೊಟೇಲ್ ನೌಕರನಿಂದ ಚೂರಿ ಇರಿದು ಕೊಲೆಗೆ ಯತ್ನ ಆರೋಪ; ದೂರು
Update: 2021-12-26 22:25 IST
ಉಡುಪಿ, ಡಿ.26: ಕ್ಷುಲ್ಲಕ ಕಾರಣಕ್ಕಾಗಿ ಹೊಟೇಲ್ ನೌಕರರು ಹೊಡೆದಾಡಿ ಕೊಂಡು ಚೂರಿ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಡಿ.25ರಂದು ರಾತ್ರಿ 10.45ರ ಸುಮಾರಿಗೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಶಾಂತಿ ಸಾಗರ್ ಹೋಟೆಲಿನ ನೌಕರರಾದ ಅತಿಶ್ ಮತ್ತು ರಝಾಕ್ ಎಂಬ ವರು ದೂಡಾಡಿಕೊಂಡು ಗಲಾಟೆ ಮಾಡಿಕೊಂಡಿದ್ದು, ಈ ವೇಳೆ ಅತಿಶ್‌ಗೆ ರಝಾಕ್ ತರಕಾರಿ ಬಕೆಟ್‌ನಿಂದ ಹೊಡೆದು, ಚೂರಿಯಿಂದ ಹೊಟ್ಟೆಯ ಭಾಗಕ್ಕೆ ತಿವಿದು ರಕ್ತಗಾಯ ಮಾಡಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದಾಗಿ ದೂರಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಅತಿಶ್ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.