ಬಜ್ಪೆ : ರಕ್ತದಾನ, ಕಚೇರಿ ಉದ್ಘಾಟನೆ, ಸಾಧಕರಿಗೆ ಸನ್ಮಾನ
ಬಜ್ಪೆ, ಡಿ. 27: ಫ್ರೆಂಡ್ಸ್ ಕ್ಲಬ್ ಕರಂಬಾರು (ರಿ) ಇದರ ಆಶ್ರಯದಲ್ಲಿ ಮರ್ಹೂಮ್ ನಿಸಾರ್ ಅಹ್ಮದ್ ಮತ್ತು ಮರ್ಹೂಮ್ ಎಂ.ಎಸ್. ಮೂಸಬ್ಬಾ ಇವರ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಹಾಗೂ ಕಚೇರಿ ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ನಝೀರ್ ಬಜಪೆ ಅವರನ್ನು ಸನ್ಮಾನಿಸಲಾಯಿತು.
ಅತಿಥಿಯಾಗಿ ಇಸ್ಮಾಯಿಲ್ ಬಜ್ಪೆ ಭಾಗವಹಿಸಿ ಮಾತನಾಡಿದರು. ಸಿರಾಜ್ ಹುಸೇನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯೆ ಸುಪ್ರೀತಾ ಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಗಣೇಶ್ ಅರ್ಬಿ, ಬಿಜೆಪಿ ಶಕ್ತಿ ಕೇಂದ್ರದ ಮಂಜು ಪ್ರಸಾದ್, ಧಾರ್ಮಿಕ ಮುಖಂಡರಾದ ಬಿ.ಕೆ. ಇಬ್ರಾಹಿಂ ಆಶ್ರಫಿ, ಕಾಮಿಲ್ ಮದನಿ, ನಝೀರ್ ಆಲಿ, ಭೋಜ ಸಾಲ್ಯಾನ್, ಅಬ್ದುಲ್ ಖಾದರ್, ಉದ್ಯಮಿ ಮನ್ಸೂರ್ ಆಲಿ, ನಿಸಾರ್ ಬಜ್ಪೆ, ಫ್ರೆಂಡ್ಸ್ ಕ್ಲಬ್ ಕರಂಬಾರು ಇದರ ಅಧ್ಯಕ್ಷ ಹಸೈನಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಹೈದರ್ ಆಡ್ಮ ಸ್ವಾಗತಿಸಿದರು. ಸಾಜಿಲ್ ಉಳಾಯಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.