×
Ad

ಮತದಾರರ ಪಟ್ಟಿಯಲ್ಲಿ ಕೇರಳ ವಿದ್ಯಾರ್ಥಿಗಳ ಹೆಸರು: ಗೊಂದಲಕ್ಕೆ ತೆರೆ ಎಳೆದ ತಹಶೀಲ್ದಾರ್

Update: 2021-12-27 11:20 IST

ಉಳ್ಳಾಲ, ಡಿ.27: ಕೋಟೆಕಾರು ಪಟ್ಟಣ ಪಂಚಾಯತ್ ಚುನಾವಣೆ ಶಾಂತಿಯುತವಾಗಿ ಮುಂದುವರಿದಿದ್ದು, ಮತದಾನ ಒಂದಿಷ್ಟು ಬಿರುಸು ಪಡೆದಿದೆ. ಈ ನಡುವೆ ಮತದಾರ ಪಟ್ಟಿಯಲ್ಲಿ ಖಾಸಗಿ ಕಾಲೇಜುಗಳ ಕೇರಳದ ವಿದ್ಯಾರ್ಥಿಗಳ ಹೆಸರುಗಳಿವೆ ಎಂಬ ವಿಚಾರ ಗೊಂದಲಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಮತಗಟ್ಟೆ ಸಂಖ್ಯೆ 5, 6ರಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಈ ಮಧ್ಯೆ ಮತದಾರರ ಪಟ್ಟಿಯ ಗೊಂದಲದ ಬಗ್ಗೆ ಸ್ಪಷ್ಟೀಕರಣ ನೀಡಿರುವ ತಹಶೀಲ್ದಾರ್ ಗುರುಪ್ರಸಾದ್, ಹಾಸ್ಟೆಲ್ ನಲ್ಲಿ ವಾಸ ಇರುವ ವಿದ್ಯಾರ್ಥಿಗಳಿಗೆ ಬೇರೆ ಕಡೆ ಮತದಾನದ ಅವಕಾಶ ಇಲ್ಲ ಎಂದು ಖಚಿತವಾದರೆ ಅವರ ಹೆಸರನ್ನು ದಾಖಲೆ ಆದರಿಸಿ ಮತದಾನ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಅವಕಾಶ ಇದೆ. ಈ ರೀತಿ ಹೆಸರು ಸೇರ್ಪಡೆಗೊಂಡಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಮತದಾನದ ವೇಳೆ ವೋಟರ್ ಐಡಿ , ಆಧಾರ್ ಕಾರ್ಡ್ ಸಹಿತ ಕಾಲೇಜು ಐಡಿ ತೋರಿಸಲೇಬೇಕು ಎಂದು ಹೇಳಿದ್ದಾರೆ.

ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆದ ವಿದ್ಯಾರ್ಥಿಗಳ ಹೆಸರು ಎರಡು ಕಡೆ ಇರಬಾರದು. ಎರಡೂ ಕಡೆ ಹೆಸರಿದ್ದ 500ಕ್ಕೂ ಅಧಿಕ ವಿದ್ಯಾರ್ಥಿಗಳ ಹೆಸರನ್ನು ಈಗಾಗಲೇ ಮತದಾನ ಪಟ್ಟಿಯಿಂದ ಕೈಬಿಡಲಾಗಿದೆ. ಹೊಸದಾಗಿ ಯಾವ ವಿದ್ಯಾರ್ಥಿಗಳ ಹೆಸರು ಮತದಾನ ಪಟ್ಟಿಗೆ ಸೇರ್ಪಡೆ ಮಾಡಿಲ್ಲ. ಈ ವಿಚಾರದಲ್ಲಿ ಗೊಂದಲ ಮಾಡುವ ಅವಶ್ಯಕತೆ ಇಲ್ಲ ಎಂದು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News