×
Ad

ವಿಟ್ಲ ಪಪಂ ಚುನಾವಣೆ: 11 ಗಂಟೆ ವೇಳೆ ಶೇ.34.31 ಮತದಾನ

Update: 2021-12-27 11:55 IST

ಬಂಟ್ವಾಳ, ಡಿ.27: ವಿಟ್ಲ ಪಟ್ಟಣ ಪಂಚಾಯತ್ ನ 18 ವಾರ್ಡುಗಳಿಗೆ ಇಂದು ಬೆಳಗ್ಗೆಯಿಂದ ಚುನಾವಣೆ ಇಂದು ನಡೆಯುತ್ತಿದ್ದು ಮತದಾರರು ಉತ್ಸಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ. 11 ಗಂಟೆಯ ವೇಳೆಗೆ ಶೇ. 34.31 ಮತದಾನವಾಗಿದೆ.

ವಿಟ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಒಕ್ಕೆತ್ತೂರು ಸರಕಾರಿ ಶಾಲೆ, ವಿಠಲ ಪದವಿ ಪೂರ್ವ ಕಾಲೇಜು, ಮೇಗಿನಪೇಟೆ, ಮತಗಟ್ಟೆಯಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದೆ. ಪೂರ್ವಾಹ್ನ 11 ಗಂಟೆ ವೇಳೆ ಶೇ.20 ಮತದಾನವಾಗಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ ನೀಡಿ ತಮ್ಮ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದರು.

ಪಟ್ಟಣ ಪಂಚಾಯತ್ ಚುನಾವಣೆಗೆ ವಿದ್ಯುತ್ ಚಾಲಿತ ಮತಯಂತ್ರಗಳನ್ನು ಬಳಸಿಕೊಳ್ಳಲಾಗಿದ್ದು ಅಗತ್ಯ ವ್ಯವಸ್ಥೆಗಳನ್ನು 18 ವಾರ್ಡ್ ನ ಮತಗಟ್ಟೆಯಲ್ಲಿ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ 4 ಅಧಿಕಾರಿಗಳು, ಓರ್ವ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.8 ವಾಹನಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ.

42 ಮಂದಿ ಅಭ್ಯರ್ಥಿಗಳು ಕಣದಲ್ಲಿರುವ ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಎಸ್.ಡಿ.ಪಿ.ಐ. ಕೆಲವು ವಾರ್ಡ್ ಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಿದೆ. ಇಬ್ಬರು ಪಕ್ಷೇತರರೂ ಕಣದಲ್ಲಿದ್ದಾರೆ. 7,191 ಮಂದಿ ಪುರುಷ ಮತದಾರರು, 7554 ಮಂದಿ ಮಹಿಳಾ ಮತದಾರರು ಸೇರಿದಂತೆ 14,715 ಮಂದಿ ಮತದಾರರಿದ್ದು, 18 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಚುನಾವಣಾ ಕಾರ್ಯಕ್ಕೆ ಸಂಬಂಧಿಸಿದಂತೆ ಪಿಆರ್‌ಒ, ಎಪಿಆರ್‌ಒ ಹಾಗೂ ಪಿಒ ಸಹಿತ ಒಟ್ಟು ೮೮ ಮಂದಿ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News