ನಾವುಂದ : ಉಚಿತ ಆಯುಷ್ಮಾನ್ ಕಾರ್ಡ್, ಇ-ಶ್ರಮ ಕಾರ್ಡ್ ಶಿಬಿರ

Update: 2021-12-27 11:14 GMT

ನಾವುಂದ :  ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ಮತ್ತು ಕರ್ನಾಟಕ ಮುಸ್ಲಿಮ್ ಜಮಾಅತ್  ಬೈಂದೂರು ಘಟಕ ಆಶ್ರಯದಲ್ಲಿ ತಾಲೂಕು ಅಧ್ಯಕ್ಷ ಅಬ್ದುಲ್ ಸಮಿ ಹಳಗೇರಿ ಅಧ್ಯಕ್ಷತೆಯಲ್ಲಿ ಆಯುಷ್ಮಾನ್ ಕಾರ್ಡ್ ಮತ್ತು ಇ-ಶ್ರಮ ಕಾರ್ಡ್ ಶಿಬಿರವು ಮೊಹಿಯುದ್ದಿನ್ ಜುಮಾ ಮಸೀದಿ ಮರವಂತೆ ನಾವುಂದದಲ್ಲಿ ಜರುಗಿತು.

ಮೌಲಾನಾ ಹನೀಫ್ ಸಹದಿ ಕಿರಾಅತ್ ಪಠಿಸಿ ಸಮಾರಂಭವನ್ನು ಪ್ರಾರಂಭಿಸಿದರು. ಜಿಲ್ಲಾಧ್ಯಕ್ಷ ಮುಷ್ತಾಕ್ ಅಹ್ಮದ್ ಬೆಳ್ವೆ ನಮ್ಮ ನಾಡ ಒಕ್ಕೂಟದ ಧ್ಯೇಯೊದ್ದೇಶ ಬಗ್ಗೆ ತಿಳಿಸಿದರು. ಡಾ. ತೇಜಸ್ವಿನಿ ಎ. (ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಉಡುಪಿ) ಆಯುಷ್ಮಾನ್ ಕಾರ್ಡ್ ನ ಉಪಯುಕ್ತತೆ ಮತ್ತು ಪ್ರಯೋಜನದ ಬಗ್ಗೆ ವರಿಸಿದರು. ಜಿಲ್ಲಾ ಉಪಾಧ್ಯಕ್ಷ ಎಸ್. ಎಮ್. ಇರ್ಷಾದ್ ನಮ್ಮ ನಾಡ ಒಕ್ಕೂಟದ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು.

ಈ ಕಾರ್ಯಕ್ರಮದ ರೂವಾರಿಗಳಾದ ಮನ್ಸೂರ್ ಇಬ್ರಾಹೀಮ್ ಮತ್ತು ಇಕ್ಬಾಲ್ ಕತರ್ ಶುಭ ಹಾರೈಸಿದರು. ಕರ್ನಾಟಕ ಮುಸ್ಲಿಮ್ ಜಮಾತಿನ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಅತಿಥಿಗಳನ್ನು ಸ್ವಾಗತಿಸಿ ಶಿಕ್ಷಣದ ಮಹತ್ವ, ಸಾಮಾಜಿಕ ಆರ್ಥಿಕ ಹಿಂದುಳಿಕೆ ಮತ್ತು ಸರಕಾರಿ ಉದ್ಯೊಗದಲ್ಲಿ ನಮ್ಮ ಕೊರತೆ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಸಮಿ ಹಳಗೇರಿ ಮುಂದಿನ ದಿನಗಳಲ್ಲಿ ನಮ್ಮ ನಾಡ ಒಕ್ಕೂಟವು ಕರ್ನಾಟಕ ಮುಸ್ಲಿಮ್ ಜಮಾತಿನ ಜೊತೆಗೂಡಿ ಹಿಂದುಳಿದ ನಮ್ಮ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.

ಜಿಲ್ಲಾ ಖಜಾಂಚಿ ಸಯ್ಯದ್ ಅಜ್ಮಲ್ ಶಿರೂರು ಮತ್ತು ಎ.ಕೆ.ಎಮ್.ಎಸ್ ನ ಮ್ಯಾನೇಜರ್ ಮುನಾಫ್ ಶಾವಿಲ್ ಹಮೀದ್ ಹೈಕಾಡಿ, ಅಬ್ದುಲ್ ವಹಾಬ್ ಇಬ್ರಾಹೀಮ್ ಮರವಂತೆ, ಕಪ್ಸಿ ಖಲೀಲ್ ಶಿರೂರು, ಮುಝಮ್ಮಿಲ್ ಕೊಯಾನಗರ, ಮುಶರ್ರಫ್  ಕೊಯಾನಗರ ಯಾಸಿರ್ ಕೊಯಾನಗರ ಮತ್ತು  ಜಮಾತಿನ ಸದಸ್ಯರು ಉಪಸ್ಥಿತರಿದ್ದರು.

ಇ-ಶ್ರಮ ಕಾರ್ಡ್ ಮಾಡಿಕೊಡಲು ಮುಸ್ತಫಾ ಕೋಯಾನಗರ, ಮುಸ್ತಫಾ ನಾವುಂದ, ಶಿನಾಝ್ ನಾವುಂದ, ಶಾಬಾನ್ ಬಡಕೆರೆ ಮತ್ತು ಫೈರೊಝ್ ನಾವುಂದ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News